ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ ‘ಯಯಾತಿ’ ಮೂಲ ಮರಾಠಿ ಕಾದಂಬರಿಯನ್ನು ವಿ.ಸ. ಖಾಂಡೇಕರ್ ರಚಿಸಿದ್ದು, ವಿ.ಎಂ. ಇನಾಂದಾರ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾಭಾರತದ ಪೂರ್ವಜರ ವಂಶವಿದು. ಯಯಾತಿ, ಪುರು, ಶರ್ಮಿಷ್ಠೆ, ದೇವಯಾನಿ, ಚಿತ್ರಲೇಖೆ ಪ್ರತಿ ಪಾತ್ರವೂ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಅರ್ಥಗರ್ಭಿತ ಪಾತ್ರಗಳು. ಯಯಾತಿ ಒಬ್ಬ ಮಹಾರಾಜ. ಆತನ ಆಸೆ-ಕನಸುಗಳನ್ನು ಈಡೇರದೇ ಹೋದಾಗ ಆತನ ಪುತ್ರ ಪುರುವಿನ ಯೌವ್ವನ ಪಡೆಯುತ್ತಾನೆ. ಪುತ್ರ ತಂದೆಯ ಕಣ್ಗೆದುರಲ್ಲೇ ವೃದ್ಧನಾಗುತ್ತಾನೆ. ಪುರುವಿನ ಪತ್ನಿ ಚಿತ್ರಲೇಖೆಯ ತೊಳಲಾಟ, ಮನೋವೇದನೆ ಹೀಗೆ ಎಲ್ಲ ಪಾತ್ರಗಳು ಓದುಗರಲ್ಲಿ ತೀವ್ರ ಸಂವೇದನೆಯನ್ನುಂಟು ಮಾಡುತ್ತವೆ.
ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್ ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ...
READ MOREಯಯಾತಿ ಪುಸ್ತಕ ಪರಿಚಯ.