ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್ ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.
ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ಕಾವ್ಯ ಮೀಮಾಂಸೆ' ಯಯಾತಿ (ಅನುವಾದ)ಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನ (1977) ದೊರೆತಿದೆ. ಅಂಬೇಡ್ಕರ್ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ (1981).