‘ಉಮ್ಮಾ’ ಲೇಖಕ ಬೊಳುವಾರು ಮಹಮದ್ ಕುಂಇ್ ಅವರ ಪ್ರಸಿದ್ಧ ಕಾದಂಬರಿ. ಇದು ಪ್ರವಾದಿ ಪತ್ನಿಯರ ಸ್ವಗತ ರೂಪದಲ್ಲಿ ಬರೆದ ಕಾದಂಬರಿ. ಚಿಕ್ಕ ಹುಡುಗಿಯ ಮದುವೆಯಾದವರು ಎಂದು ಆಪಾದನೆ ಹೊತ್ತ, ದೊಡ್ಡವರ ಮದುವೆಯಾದವರು ಎಂದೂ ಕರೆಯಿಸಿಕೊಂಡ ಮಹಮ್ಮದರ ಪತ್ನಿಯರ ಕತೆ ಏನು? ಬಹಳ ಹಿಂದೆ ರಶ್ದೀ ಅವರ ಸಟಾನಿಕ್ ವರ್ಸಸ್ ಅನ್ನುವ ಕಾದಂಬರಿಯಲ್ಲಿ ಕೆಟ್ಟದಾಗಿ ಚಿತ್ರಿಸಿದ ಪಾತ್ರಗಳಿಗೆ ಪ್ರವಾದಿ ಪತ್ನಿಯರ ಹೆಸರು ನೀಡಿ ವಿವಾದಕ್ಕೊಳಗಾಗಿದ್ದರು. ಇದು ಹಾಗಿಲ್ಲ. ಆ ಕಾಲದ ಸಾಮಾಜಿಕ ಚಿತ್ರಣದ ಜೊತೆಗೆ ನಮಗೆ ಅನ್ಯಧರ್ಮೀಯರಿಗೆ ಗೊತ್ತಿಲ್ಲದ ಜಗತ್ತಿನೊಳಗೆ ಪ್ರವೇಶ ನೀಡುತ್ತದೆ.
ಕನ್ನಡದ ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...
READ MOREವಾರ್ತಾಭಾರತಿ: ಸಾಹಸಿ ಕತೆಗಾರ ಬೊಳುವಾರರ ಅನನ್ಯ ಕಾದಂಬರಿ