ಖ್ಯಾತ ಕಾದಂಬರಿಕಾರ ತ.ರಾ.ಸು. ಅವರ ಐತಿಹಾಸಿಕ ಕಾದಂಬರಿ-ತಿರುಗುಬಾಣ. ತನ್ನ ಆಜ್ಞೆಯನ್ನು ಉಲ್ಲಂಘಿಸಿದ ಎಂಬ ಕಾರಣಕ್ಕೆ ಅರಮನೆಯ ಮೇಲೆ ದಾಳಿ ಮಾಡಿದ ಮುದ್ದಣ್ಣ, ಪಟ್ಟವೇರಿದ್ದ ಲಿಂಗಣ್ಣ ನಾಯಕನನ್ನು ಹತ್ಯೆ ಮಾಡುತ್ತಾನೆ. ತಾನೇ ರಾಜ್ಯಭಾರದ ಹೊಣೆಗಾರಿಕೆ ವಹಿಸಿಕೊಳ್ಳುತ್ತಾನೆ. ಪರಮೇಶಪ್ಪ ಮತ್ತು ಭುವನಪ್ಪನವರು ಬಂಧಿಯಾಗಿರುತ್ತಾರೆ. ಇವರಿಬ್ಬರೂ ಲಿಂಗಣ್ಣ ನಾಯಕರ ಆಪ್ತರು. ಮಲ್ಲವ್ವ ನಾಗತಿ ಅವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಉಗ್ರ ಚೆನ್ನವೀರಸ್ವಾಮಿಗಳು ಕಾರಣ ಎಂಬುದು ಮುದ್ದಣ್ಣನ ಊಹೆ. ಅವರನ್ನು ಅರಮನೆಯಿಂದ ಹೊರಗೆ ದಬ್ಬುತ್ತಾನೆ. ತಾನು ಆಯ್ಕೆ ಮಾಡಿದವರೇ ಪಟ್ಟಕ್ಕೇರುವಂತೆ ಮುದ್ದಣ್ಣ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ. ರಂಗಪ್ಪನಾಯಕರನ್ನು ಪಟ್ಟಕ್ಕೇರಿಸುತ್ತಾನೆ. ಇದರಿಂದ, ಸಂಚುಗಳು ಹೆಚ್ಚುತ್ತವೆ. ವ್ಯೂಹ-ಪ್ರತಿವೂಹ್ಯಗಳು ಬೆಳೆಯುತ್ತಲೇ ಹೋಗುತ್ತವೆ. ಈ ಕಥಾಹಂದರವೇ ತಿರುಗುಬಾಣ ಕಾದಂಬರಿಯ ವಸ್ತುವಾಗಿದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE