ಶ್ರವಣಬೆಳಗೊಳದ, ಲೋಕೋತ್ತರವಾದ, ಸರ್ವಾಶ್ಚರ್ಯಕರವಾದ ಭೂಮ ಕಲಾಕೃತಿ ಗೊಮ್ಮಟೇಶ್ವರ ಶಿಲ್ಪದ ಸೃಷ್ಟಿಗೆ ಕಾರಣಕರ್ತನಾದ ಚಾವುಂಡರಾಯ, ರನ್ನ ಮಹಾಕವಿಗೆ ಆಶ್ರಯವಿತ್ತುಅವನಿಂದ ಕೀರ್ತಿತನಾದ ಸಾರ್ಥಕ ಜೀವಿ. ಕನ್ನಡ ಸಾಹಿತ್ಯದ ಅತಿ ಪ್ರಾಚೀನ ಗದ್ಯಕೃತಿಗಳಲ್ಲೊಂದಾದ ಶ್ರೀಷಷ್ಟಿ ಲಕ್ಷಣ ಮಹಾಪುರಾಣವನ್ನು ರಚಿಸಿದ ಕವಿ. ಹೀಗೆ ಬಹುಮುಖ ಸಾಧನೆಯಿಂದ ತನ್ನ ಬಾಳನ್ನು ಸಾರ್ಥಕಪಡಿಸಿಕೊಂಡ ಚಾವುಂಡರಾಯನ ಜೀವನದ ಆಧಾರದ ಮೇಲೆ ರಚಿತವಾದ ಕಾದಂಬರಿ ಶಿಲ್ಪಶ್ರೀ. ತ.ರಾ.ಸು ಈ ಕಾದಂಬರಿಯನ್ನು ರಚಿಸಿದವರು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE