‘ರೂಪಾಲಿ ಅಲ್ಲ...ಕಾಳಿ’ ಈ ಕಾದಂಬರಿಯನ್ನು ಡಾ. ಶ್ರೀದೇವಿ ಎಲ್. ರಾಠೋಡ ಅವರು ರಚಿಸಿದ್ದಾರೆ. ಹೆಣ್ಣಿಗೆ ಅಂದ-ಚೆಂದ ಬಹಳ ಮುಖ್ಯ. ಸಮಾಜ ಇದನ್ನು ನಿರೀಕ್ಷಿಸುತ್ತದೆ. ಅಂದವಿಲ್ಲದ ಹೆಣ್ಣಿನ ಬದುಕಿನಲ್ಲಿ ಹಲವಾರು ಬಗೆಯ ಅವಮಾನನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ , ಈ ಕಾದಂಬರಿಯ ನಾಯಕಿ ಕಪ್ಪು ಇರುವ ಕಾರಣ ಅವಳಿಗೆ ಅವಮಾನ ಹಿಂಸೆ ಅನುಭವಿಸುತ್ತಾಳೆ. ಹೆಣ್ಣಿನ ಮನ ಬದಲಾಗಿ ಗಂಡಿನಂತೆ ಕೃಷಿ ಕೆಲಸ ಮಾಡುವ ಮೂಲಕ ತನ್ನ ಅಸ್ತಿತ್ವ ಮರೆತು ಗಂಡಿನಂತೆ ಬದುಕುವ ವ್ಯವಸ್ಥೆ ಕಂಡುಕೊಂಡಾಗ ಅದನ್ನು ಸಮಾಜದಲ್ಲಿ ಒಪ್ಪಿಕೊಳ್ಳದೇ ಮತ್ತೂ ಹೀಯಾಳಿಸುತ್ತದೆ. ಸಮಾಜದ ಇಬ್ಬಗೆಯ ನಥಿಯನ್ನು ಪ್ರಶ್ನಿಸುವ, ಅಣುಕಿಸುವ ವಸ್ತುವೇ ಈ ಕಾದಂಬರಿ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE