ಪಂಪನ ಬನವಾಸಿ, ಕುವೆಂಪು ಅವರ ಮಲೆನಾಡು, ಬೇಂದ್ರೆಯವರ ಸಾಧನಕೇರಿ, ಚಿತ್ತಾಲರ ಹನೇಹಳ್ಳಿ ಕನ್ನಡಸಾಹಿತ್ಯಲೋಕದ ಬಹು ಚರ್ಚಿತ ಪ್ರದೇಶಗಳು. ಇಲ್ಲಿಯ ಬದುಕಿನ ಕ್ರಮಗಳು, ನಿಸರ್ಗದ ವೈವಿಧ್ಯಗಳು ಬಹಳಷ್ಟು ಸಾಹಿತ್ಯ ಕೃತಿಗಳಿಗೆ ಜೀವದ್ರವ್ಯ ನೀಡಿವೆ. ಕುವೆಂಪು ಮತ್ತು ತೇಜಸ್ವಿ ಮಲೆನಾಡಿನ ಸಮೃದ್ಧ ಜೀವನಾನುಭವಗಳ ಚಿತ್ರಣವನ್ನು ಕಟ್ಟಿಕೊಡುವುದನ್ನು ಗಮನಿಸಿದಾಗ ಆ ಬಗ್ಗೆ ಬರೆಯಲು ಇನ್ನೇನೂ ಉಳಿದಿಲ್ಲ ಎನಿಸುತ್ತದೆ. ಆದರೆ, ಅಷ್ಟರಲ್ಲಿಯೇ ಬಿಳುಮನೆ ರಾಮದಾಸರ ‘ರೋಜಾಪುಸ್ತಕ’ ಎಂಬ ಈ ಕಾದಂಬರಿ ಪ್ರಕಟವಾಗಿದೆ. ಗಾತ್ರದಲ್ಲಿ ಬೃಹತ್ತಾಗಿದ್ದು, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮತ್ತೆ ಮತ್ತೆ ನೆನಪಿಗೆ ತರುವ ಹಾಗೂ ಕಾದಂಬರಿ ಪ್ರಕಾರಕ್ಕೆ ಮಹತ್ವಪೂರ್ಣವಾದ ಕೊಡುಗೆಯಾಗಿದೆ.
ಹಿರಿಯ ಕಾದಂಬರಿಕಾರ ಬಿಳುಮನೆ ರಾಮದಾಸ್ ಅವರು 1941 ಮಾರ್ಚಿ 09 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿಳುಮನೆಯವರು. ತಂದೆಯವರ ಓದಿನ ಬಳುವಳಿ ಪಡೆದಿದ್ದ ಅವರು ಕಥೆ, ಕಾದಂಬರಿಗಳನ್ನು ಬರೆದರು. ‘ಮರಳಿನ ಮನೆ’, ‘ಕುಂಜ’, ‘ನಂಬಿ ಕೆಟ್ಟವರಿಲ್ಲವೋ’, ‘ಕರಾವಳಿಯ ಹುಡುಗಿ’, ‘ವ್ಯಾಮೋಹ’ ಪ್ರಮುಖ ಕಾದಂಬರಿಗಳು. ಕಾದಂಬರಿ ‘ತಲೆಮಾರು’ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರವಾಗಿತ್ತು. ‘ಹುಲಿ ಮಾಡಿಸಿದ ಮದುವೆ ಮತ್ತು ಇತರ ಪ್ರಬಂಧಗಳು’ -ಪ್ರಬಂಧ ಸಂಕಲನ. ಅವರ ಸಾಹಿತ್ಯ ಸೇವೆಗೆ ‘ಹಾವನೂರ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ...
READ MORE