About the Author

ಹಿರಿಯ ಕಾದಂಬರಿಕಾರ ಬಿಳುಮನೆ ರಾಮದಾಸ್ ಅವರು 1941 ಮಾರ್ಚಿ 09 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಿಳುಮನೆಯವರು. ತಂದೆಯವರ ಓದಿನ ಬಳುವಳಿ ಪಡೆದಿದ್ದ ಅವರು ಕಥೆ, ಕಾದಂಬರಿಗಳನ್ನು ಬರೆದರು. ‘ಮರಳಿನ ಮನೆ’, ‘ಕುಂಜ’, ‘ನಂಬಿ ಕೆಟ್ಟವರಿಲ್ಲವೋ’, ‘ಕರಾವಳಿಯ ಹುಡುಗಿ’, ‘ವ್ಯಾಮೋಹ’ ಪ್ರಮುಖ ಕಾದಂಬರಿಗಳು. ಕಾದಂಬರಿ ‘ತಲೆಮಾರು’ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರವಾಗಿತ್ತು. ‘ಹುಲಿ ಮಾಡಿಸಿದ ಮದುವೆ ಮತ್ತು ಇತರ ಪ್ರಬಂಧಗಳು’ -ಪ್ರಬಂಧ ಸಂಕಲನ. ಅವರ ಸಾಹಿತ್ಯ ಸೇವೆಗೆ ‘ಹಾವನೂರ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ರಾಜ್ಯೋತ್ಸವ ಸನ್ಮಾನಗಳು ಲಭಿಸಿವೆ. ಅವರು 2020 ಮಾರ್ಚ್  25 ರಂದು ಹೃದಯಾಘಾತದಿಂದ ನಿಧನರಾದರು.

 

ಬಿಳುಮನೆ ರಾಮದಾಸ್

(09 Mar 1941-25 Mar 2020)