"ರಾಯಗಡದ ರಾಣಿ" ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ಕಾದಂಬರಿ. ಇದೊಂದು ಬಂಡಾಯಗಾರ ಕಾದಂಬರಿಯಾಗಿದ್ದು, ರಾಯಗಡದ ರಾಜೇಶ್ವರಿ ತೆಲಂಗಾಣ ಮತ್ತು ಎಡೆದೊರೆ ಪ್ರಾಂತದ ಗಡಿ ರೇಖಾರಾಣಿ, ಆಕೆ ನಾಡಿನ ಪ್ರತಿಭಟನಾತ್ಮಕತೆಯ ರೂಪಕ. ಈ ಪಾತ್ರ ಓದಂಗಲ್ಲನ ಕಾಕತೀಯ ಸಾಮ್ರಾಜ್ಞಿ ರುದ್ರಮ್ಮ ದೇವಿಯನ್ನು ನೆನಪಿಸುತ್ತದೆ. ಜೊತೆಗೆ ಇತಿಹಾಸದ ಉದ್ದಗಲಕ್ಕೂ ದಾಳಿ ಹಲ್ಲೆ ಕಾಳಗಗಳ ಫಲಾನುಬವಿ ಈ ಬೆಟ್ಟದೂರು, ನೀರಮಾನ್ವಿ ಇವೆರಡೂ ವೈಚಾರಿಕತೆಯ ಎರಡು ಮುಖಗಳು. ನಾಡಿನ ಪ್ರಖರ ವಿಚಾರವಾದಿಗಳನ್ನು ನೀಡಿದ ಕಪ್ಪು ಭೂಮಿ. ದೋ ಅಬ್ ಪ್ರಾಂತ್ಯದ ಪ್ರಾದೇಶಿಕ ಭಾಷೆಯನ್ನು ಸಂಗೀತಾತ್ಮಕವಾಗಿ ಈ ಕೃತಿಯಲ್ಲಿ ಬಳಸಿದ್ದಾರೆ. ಈ ಬಂಡಾಯಗಾರ ಕಾದಂಬರಿ ನೆಪದಲ್ಲಿ ಭಾಷೆಯನ್ನೇ ಬರೆದಿರುವರೋ ಭಾಷೆಯ ನೆಪದಲ್ಲಿ ಕಾದಂಬರಿಯನ್ನು ಬರೆದಿರುವರೋ ಆದರೆ ಇವೆರಡನ್ನೂ ಏಕಕಾಲಕ್ಕೆ ಸಾಧಿಸಿದ್ದಾರೆ, ರಾಯಗಡದ ರಾಜೇಶ್ವರಿ ತೆಲಂಗಾಣ ಮತ್ತು ಎಡೆದೊರೆ ಪ್ರಾಂತದ ಗಡಿ ರೇಖಾರಾಣಿ, ಆಕೆ ನಾಡಿನ ಪ್ರತಿಭಟನಾತ್ಮಕತೆಯ ರೂಪಕ. ಈ ಪಾತ್ರ ಓರಂಗಲ್ಲನ ಕಾಕತೀಯ ಸಾಮ್ರಾಜ್ಞಿ ರುದ್ರಮ್ಮ ದೇವಿಯನ್ನು ನೆನಪಿಸುತ್ತದೆ, ಈ ಕಾದಂಬರಿ ಜನಪ್ರಿಯ ಸಿನೆಮಾಕ್ಕೆ ಹೇಳಿ ಮಾಡಿಸಿದಂತಿದೆ.
ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...
READ MORE