"ನಾನು ಹಿಂದೂ ಅಲ್ಲ ಎಂದರೆ ನೀವು ನಂಬಬೇಕು. ಹೌದು, ನಾನು ಮುಸ್ಲಿಂ ಅಲ್ಲ ಕ್ರೈಸ್ತ, ಜೈನ, ಬೌದ್ಧ ಯಾವುದೂ ಅಲ್ಲ ನಾನು ಮನುಷ್ಯನೆಂದರೆ ನೀವು ನಂಬಲೇಬೇಕು! " ಧರ್ಮ ಎಂದರೇನು ಎಂಬ ಪ್ರಶ್ನೆಗೆ ಸುಲಭವಾಗಿ ಮತ್ತು ನೇರವಾಗಿ ಯಾರೂ ಉತ್ತರಿಸಲಾರದಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಧರ್ಮವೆಂದರೆ ಆಚಾರ, ವಿಚಾರ, ಅಸ್ತಿತ್ವ ಎಂದು ನಂಬಲಾಗಿದ್ದ ದಿನಗಳು ದೂರವಾಗಿ, ಧರ್ಮ ಎಂದರೆ ಒಡೆದು ಆಳುವ ರಾಕ್ಷಸರ ಮಂತ್ರ ಎಂಬಂತಾಗಿದೆ. ಸಧ್ಯ ಗೂಂದಲಗಳ ಗೂಡಿನಲ್ಲಿರುವ ಎಷ್ಟೋ ಮುಗ್ಧ ಮನಸ್ಸುಗಳಲ್ಲಿ ಈ ಕಾದಂಬರಿಯ ವಸ್ತು ಚೂರು ಕಣ್ಣು ತೆರೆಸಬಹುದು. ಧರ್ಮ ಧರ್ಮಗಳು ಮುಖಾಮುಖಿಯಾಗಿ ಯುದ್ಧ ಸಾರುವ ಬದಲು ಪ್ರೀತಿ ಹುಡುಕಬೇಕು! ಆ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕು. ನಾವು ನೀವುಗಳೇ ಧರ್ಮ! ಧರ್ಮಕ್ಕಿಂತ ಮಾನವೀಯತೆ ಮುಖ್ಯವೆಂಬುದು ನಮ್ಮ ಅರಿವಿಗೆ ಬಂದ ದಿನ ಎಲ್ಲ ಧರ್ಮಗಳು ಒಂದಾಗುತ್ತವೆ. ಆಗ ಜಗತ್ತಿನಲ್ಲಿ ಶಾಂತಿಯನ್ನೊರತುಪಡಿಸಿ ಬೇರೇನೂ ಇರುವುದಿಲ್ಲ.
ಪುಷ್ಪ ಎಚ್ ಎಂ ಅವರು ಮೂಲತಃ ಹುಲಿಯೂರುದುರ್ಗದವರು. ಪ್ರಸ್ತುತ ಮಂಡ್ಯದಲ್ಲಿ ವಾಸವಾಗಿದ್ದಾರೆ. ಅವರು ಅಲೈಕ್ಯ ಮೈತ್ರೇಯಿ ಎಂಬ ಕಾವ್ಯ ನಾಮದೊಂದಿಗೆ ಪಿಂಕಿ ವೇ ಚೊಚ್ಚಲ ಕಾದಂಬರಿಯನ್ನು ಬರೆದಿದ್ದಾರೆ . ಕೃತಿಗಳು : ಪಿಂಕಿ ವೇ ...
READ MORE