ಲೇಖಕಿ ಸಂಧ್ಯಾ ಶರ್ಮ ವೈ.ಕೆ ಅವರ ಕಾದಂಬರಿ ಪರಿವೇಷ. ಸುಮತೀಂದ್ರ ನಾಡಿಗ್ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಈ ಕಾದ೦ಬರಿ, ಸ೦ಪ್ರದಾಯ ಮತ್ತು ಹೊಸತನಗಳೆರಡನ್ನೂ ಮೈಗೂಡಿಸಿಕೊಂಡಿದೆ. ಕಥಾನಾಯಕಿ ತೃಪ್ತಿ ಯಾವುದಕ್ಕೂ ಮುಂದೆ ನುಗ್ಗುವವಳಲ್ಲ. ಹಾಗಾಗಿ ಅವಳು ಆಧುನಿಕ ಸ್ತ್ರೀಯರ ಪ್ರತಿನಿಧಿಯಲ್ಲ. ಆದರೆ ಅವಳು ತನ್ನ ದಾರಿಯಲ್ಲಿ ಬಂದ ವಿವಾಹ ವಿಚ್ಛೇದನವನ್ನು ಒಪ್ಪಿಕೊಂಡು, ಮರುಮದುವೆಗೆ ತಯಾರಾಗುವುದು ಸಂಪ್ರದಾಯ ಸ್ತ್ರೀಗೆ ಹೇಳಿಸಿದ್ದಲ್ಲ. ಹೀಗೆ ವಿಚಿತ್ರ ತೂಕದ ಹುಡುಗಿ ತೃಪ್ತಿ, ಅವಳು ದುರ್ಬಲಳೆ? ಸೋತವಳೆ? ಅಥವಾ ಸಹನೆ, ತಾಳ್ಮೆ, ಕ್ಷಮೆ ಮತ್ತು ಕರುಣೆಗಳಿಂದ ಶಕ್ತಿಯನ್ನು ಪಡೆದವಳೆ? – ಹೀಗೆ ಈ ಪಾತ್ರ ಕಾಡುತ್ತದೆ. ಕುಮಾರಿ ಸಂಧ್ಯಾ ಅವರ ಸಾಮಾಜಿಕ ಮೌಲ್ಯಗಳ ಕಲ್ಪನೆ ಘಟನಾವಳಿಯ ಯೋಜನೆಯಲ್ಲಿ ಕಾಣಿಸುತ್ತದೆಯೇ ಹೊರತು ಯಾವುದೇ ಪಾತ್ರದ ಮಾತಿನಲ್ಲಿ ಅಥವಾ ಆಲೋಚನಾಸರಣಿಯಲ್ಲಿ ಕಾಣಿಸುವುದಿಲ್ಲ. ಇನ್ನೊಂದು ವಿಚಿತ್ರವೆಂದರೆ ಕಥಾನಾಯಕಿ ತೃಪ್ತಿ, ಮನೋಹರ ಎನ್ನುವವರನ್ನು ಮದುವೆಯಾದರೂ, ಮನೋಹರನಿಗೆ ತೃಪ್ತಿ ಸಿಗಲಿಲ್ಲ ಮತ್ತು ತೃಪ್ತಿಗೆ ಸಂತೋಷ ಸಿಗಲಿಲ್ಲ ಎನಿಸುತ್ತದೆ. ಇದಕ್ಕೆ ಕಾರಣ ತೃಪ್ತಿಯ ಸಾಂಪ್ರದಾಯಿಕ ವರ್ತನೆ ಎನಿಸುತ್ತದೆ. ಹೆಣ್ಣು ತನ್ನ ಪ್ರಣಯ ಭಾವನೆಗಳನ್ನು ಮತ್ತು ಸಾಮಾಜಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದೆನ್ನುವ ಕಲ್ಪನೆಗೆ ಸರಿಯಾಗಿ ಆಕೆ ನಡೆದುಕೊಳ್ಳುತ್ತಾಳೆ. ಒಟ್ಟಿನಲ್ಲಿ ಈ ಕಾದಂಬರಿ ಒಮ್ಮೆ ಓದಿದರೆ ಮುಗಿಯುವುದಿಲ್ಲ ಎನಿಸುತ್ತದೆ. ಏಕೆಂದರೆ ಈ ಪಾತ್ರಗಳು ನಮ್ಮ ನಿಮ್ಮ ಮನಸ್ಸಿನಲ್ಲಿ ಮುಂದುವರಿಯುತ್ತದೆ ಎಂಬುದಾಗಿ ಹೇಳಿದ್ದಾರೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE