ಪಾಚಿ ಕಟ್ಟಿದ ಪಾಗಾರ ಎಂಬುದು ಮಿತ್ರಾ ವೆಂಕಟ್ರಾಜ್ ಅವರು ಬರೆದ ಕಾದಂಬರಿ. ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಜೀವನದಲ್ಲಿ ಎದುರಾಗುವ ಘಟನೆಗಳಿಗೆ, ಪಾತ್ರಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿನೀತಿಗಳು ಇತರ ಸಾಧಾರಣ ಕುಟುಂಬಗಳ ಮೇಲೆ ಬೀರುವ ಪರಿಣಾಮ ಯಾವ ರೀತಿಯದಾಗಿರುತ್ತದೆ ಎಂಬುದನ್ನು ಸವಿವರವಾಗಿ ಚಿತ್ರಿಸಿದ್ದಾರೆ. ಕಾದಂಬರಿಯಲ್ಲಿ ಬರುವ ಮಾಧವ, ಯೌವನಾವಸ್ಥೆಯಲ್ಲಿ ‘ಆಡಿದ್ದೆ ಆಟ’ ಎಂಬ ರೀತಿಯಲ್ಲಿ ತನ್ನ ಮದುವೆಯನ್ನೇ ಧಿಕ್ಕರಿಸಿ ಊರಿಗೆ ಊರೇ ಹೆದರುವಂತೆ ಪುಢಾರಿಯಾಗುತ್ತಾನೆ. ಆದರೆ ತನ್ನ ತಂದೆ ಸತ್ತ ಮೇಲೆ, ತಮ್ಮನ ಶಿಕ್ಷಣದಿಂದ ಹಿಡಿದು ಇಡೀ ಮನೆಯನ್ನು ಜವಾಬ್ದಾರಿಯುತ ಯಜಮಾನನಾಗಿ ನಿರ್ವಹಿಸುವ ರೀತಿ ದಂಗುಬಡಿಸುತ್ತದೆ. ತಾನು ನಿರಾಕರಿಸಿದ ಹೆಣ್ಣು ಪಾರಾಳ ಬದುಕು ಅತಂತ್ರವಾದಾಗ ಅದನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವ ಅವರ ಧೋರಣೆಯು ಬದಲಾದ ಜೀವನ ಘಟನೆಗಳಿಗೆ ಹಿಡಿದ ಕನ್ನಡಿಯಾಗಿದೆ. ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆಯಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಕಥೆಗಾರ್ತಿ ಮಿತ್ರಾವೆಂಕಟ್ರಾಜ್ ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ...
READ MORE