`ದಮಯಂತಿ ನರೇಗಲ್ಲರು' ಅದಾಗಲೇ ಸಾಕಷ್ಟು ಹೆಸರು ಮಾಡಿದ ಸಾಹಿತಿಯಾಗಿದ್ದಾರೆ. ನಿವೃತ್ತರಾಗಿ ಅವರು ಧಾರವಾಡಕ್ಕೆ ಬಂದು ನೆಲೆಸಿದ ಮೇಲೆ ಒಂದಾದರ ಮೇಲೊಂದರಂತೆ ಹಲವಾರು ಕತೆ- ಕಾದಂಬರಿಗಳನ್ನು ರಚಿಸಿ ಒಳ್ಳೆಯ ಸಾಹಿತಿಯೆಂದು ಅದಾಗಲೇ ಹೆಸರು ಮಾಡಿದ್ದಾರೆ. ಅವರ ಕಾದಂಬರಿ 'ಯಯಾತಿ' 'ಪ್ರಸಂಗ' ಮಾಸ್ತಿ ಪ್ರಶಸ್ತಿ ಸಮಿತಿಯ ಬಹುಮಾನವನ್ನು ಪಡೆದುಕೊಂಡು ಅವರಿಗೆ ಹೆಸರು ತಂದಿದೆ. ಅವರ ಇನ್ನೊಂದು ಕಾದಂಬರಿ 'ತ್ರಿವೇಣಿ'ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ. 'ಕತೆಯಾದಳು ಅಜ್ಜಿ' ಹಾಗೂ 'ತಿಪ್ಪೆಯ ರಾಣಿ' ಅವರ ಗಮನಾರ್ಹ ಸಣ್ಣ ಕಥಾ ಸಂಕಲನಗಳು. ಹುಬ್ಬಳ್ಳಿಯ ಪ್ರಸಿದ್ಧ ಮಹಿಳಾ ಸಾಹಿತ್ಯಕಾ ಪ್ರಕಾಶನವು ಅವರ ಮಹತ್ವದ ಕಾದಂಬರಿಯಾದ 'ಕಲ್ಲು ಖಣಿಯಾಗು, ಕರಿಕೀ ಬೇರಾಗು'ವನ್ನು ಪ್ರಕಟಿಸಿದೆ ಎನ್ನುತ್ತಾರೆ ರಂಜನ ಭಟ್ಟ.
ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು. ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು. ...
READ MORE