ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು. ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು.