ಮೈ ಡಿಯರ್ ಫ್ರೆಂಡ್ ಕೌಂಡಿನ್ಯ ಅವರ ರಚನೆಯ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಗೆಳೆತನ ಎಂಬುದು ಉಳಿದ ಎಲ್ಲಾ ಸಂಬಂಧಗಳಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಭಾವನಾತ್ಮಕ ಮಿಡಿತ ಇರುತ್ತದೆ. ಕಷ್ಟ ಕಾಲದಲ್ಲಿ ಸಂಬಂಧಿಕರು ದೂರ ಸರಿದಾಗ ನೆರವಿಗೆ ಬರುತ್ತಾನೆ ನಿಜವಾದ ಗೆಳೆಯ. ಈ ಕಾದಂಬರಿಯಲ್ಲಿ ಇಬ್ಬರು ಗೆಳೆಯರ ಗೆಳೆತನದ ಮಹತ್ವವನ್ನು ವಿವರಿಸಲಾಗಿದೆ. ನವಿರಾದ ಹಾಸ್ಯ ಮತ್ತು ಮೈಗೆ ಕಚಗುಳಿ ಇಡುವ ಸನ್ನಿವೇಶಗಳೊಂದಿಗೆ ವಿಭಿನ್ನ ರೀತಿಯಲ್ಲಿ ನಿರೂಪಿಸಲಾಗಿದೆ.
ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ. ಪ್ರಶಸ್ತಿ ...
READ MORE