‘ಮೂಲ ಮುಖಿ’ ಕೃತಿಯು ಅನುಪಮಾ ನಿರಂಜನ ಅವರ ಕೊನೆಯ ಕಾದಂಬರಿ. ವೈದ್ಯಕೀಯ ವಿಚಾರಗಳನ್ನು ಒಳಗೊಂಡಿರುವಂತಹ ಈ ಕೃತಿಯು ಅನುವಂಶೀಯತೆಯ ಬಗೆಯೂ ಮಾಹಿತಿಯನ್ನು ನೀಡುತ್ತದೆ. ಹಳ್ಳಿಯ ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದಿರುವಂತಹ ಅಂಧಶ್ರದ್ದೆ, ಜಾತೀಯತೆ ಹಾಗೂ ಬಡತನ, ಸಾಲ ಮರುಪಾವತಿಸಲಾಗದೆ ಮಕ್ಕಳನ್ನು ಜೀತಕ್ಕೆ ಒಳಪಡಿಸುವಂತಹ ಪ್ರಕ್ರಿಯೆ ಇವೆಲ್ಲವು ಕಥಾವಸ್ತುಗಳಾಗಿ ಬಳಸಿಕೊಳ್ಳಲಾಗಿದೆ. ಹೆಣ್ಣುಮಕ್ಕಳ ಶೋಷಣೆ, ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಕೊಲೆ ಪ್ರಮುಖ ಕಥಾ ವಸ್ತುವಾಗಿವೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE