ಮೊದಲ ಹೆಜ್ಜೆ

Author : ತ್ರಿವೇಣಿ

Pages 209

₹ 110.00




Year of Publication: 2018
Published by: ತ್ರಿವೇಣಿ ಪಬ್ಲಿಕೇಷನ್ಸ್ 
Address: 1195,ಬಾಲಕೃಷ್ಣರಾವ್ ರಸ್ತೆ, ಚಾಮರಾಜಪುರಂ, ಮೈಸೂರು-570005

Synopsys

‘ಮೊದಲ ಹೆಜ್ಜೆ’-ತ್ರಿವೇಣಿ ಅವರ ಕಾದಂಬರಿ. ಸರ್ವರೂ ಒಪ್ಪಿತ ಮಾರ್ಗದಿಂದ ವಿಮುಖವಾಗಿ ಕಷ್ಟ ಅನುಭವಿಸುವ ಹುಡುಗಿಯೊಬ್ಬಳ ದಾರುಣ ಕಥೆ ಇದು. ಪ್ರೇಮ ಎಂಬುದು ಗಂಡಿಗೆ ಆತನ ಜೀವನದ ಒಂದು ಭಾಗ ಮಾತ್ರ. ಆದರೆ, ಹೆಣ್ಣಿಗೆ ಅವಳ ಇಡೀ ಜೀವನವೇ ಆಗಿರುತ್ತದೆ. ಒಂದು ವೇಳೆ ಪ್ರೇಮಿಸಿದ ಗಂಡು ವಂಚಿಸಿದರೆ ಹೇಗೆ? ಅವಳ ಬಾಳು ಪಾತಾಳ ಕಾಣುತ್ತದೆ. ಇಂತಹ ಕಥೆಯನ್ನು ಹೇಳುವಾಗ ಲೇಖಕಿ ಮನೋವಿಶ್ಲೇಷಣೆ ತಂತ್ರಕ್ಕೆ ಮೊರೆ ಹೋಗುತ್ತಾರೆ. ಅದು ಆಗಬೇಕಾದದ್ದು. ಈ ಕಾರಣದಿಂದಲೇ, ತ್ರಿವೇಣಿಯು ಇತರರ ಬರವಣಿಗೆಗಿಂತ ಭಿನ್ನವಾಗುತ್ತಾರೆ.  ಕಾದಂಬರಿಯ ಮೊದಲ ಬಾರಿಗೆ ಭಾರತಿ ಪ್ರಕಾಶನ ಪ್ರಕಟಿಸಿತ್ತು.

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books