ಮಾಯಾಲೋಕ-1 (2006) ತೇಜಸ್ವಿ ಅವರು ರಚಿಸಿದ ಕೊನೆಯ ಕಾದಂಬರಿ. ಕನ್ನಡ ಕಥನಲೋಕಕ್ಕೆ ಹೊಸ ಮಾರ್ಗವೊಂದನ್ನು ಕಾಣಿಸಿದ ಕೃತಿಯಿದು. ಸನ್ನಿವೇಶ ಸವಾಲುಗಳನ್ನು ಎದುರಿಸಲು ನಾವು ಹೊಸ ದಿಂಗತಗಳ ಕಡೆಗೆ ಹೋಗಬೇಕಾಗಿರುವ ಅಗತ್ಯವನ್ನು ತೇಜಸ್ವಿ ಪ್ರತಿಪಾದಿಸಿದ್ದಾರೆ. ರಾಜಕೀಯ, ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ವೈಯಕ್ತಿಕ, ಪರಿಸರ, ಸಾಂಸ್ಕೃತಿಕ ಬದುಕುಗಳಲ್ಲಿ ಉಂಟಾಗುತ್ತಿರುವ ಬದಲಾವಣೆಯ ಸಂದರ್ಭದಲ್ಲಿ ಹೊಸ ಅಭಿವ್ಯಕ್ತಿ ನೆಲೆಯಲ್ಲಿ 'ಮಾಯಾಲೋಕ' ಪ್ರಕಟಗೊಂಡಿದೆ. ತೇಜಸ್ವಿ ಅವರೇ ಸೂಚಿಸುವಂತೆ ’ಇದೊಂದು ಕೊಲಾಜ್ ಮಾದರಿಯ ಕಲಾಕೃತ”. ಇಲ್ಲಿನ ಕಥಾ ಪ್ರತಿಮೆಗಳು ಹಾಗೂ ದೃಶ್ಯ ಪ್ರತಿಮೆಗಳು ಒಂದರ ಮೇಲೊಂದು ಸಂಯೋಜನೆಗೊಳ್ಳುವದರ ಜೊತೆಗೆ ಮಾಯಾಲೋಕ ಸೃಷ್ಟಿಸುತ್ತವೆ. ಈ ಕಾದಂಬರಿಯ ಕೆಲವು ಸಂಪುಟಗಳ ಸರಣಿಯನ್ನೇ ಬರೆಯಲು ತೇಜಸ್ವಿ ಉದ್ದೇಶಿಸಿದ್ದರು. ಆದರೆ ಅವರ ಅಕಾಲ ನಿಧನದಿಂದ ಈ ಆಶಯ ಮಾಯಾಲೋಕ-೧ಕ್ಕೆ ನಿಂತು ಹೋಯಿತು. ಇದನ್ನು ಸ್ವತಂತ್ರ ಕೃತಿಯಾಗಿ ಓದಬಹುದು. ಹೇಮಾವತಿ ನದಿಯಂತೆ ಸದ್ದುಗದ್ದಲಗಳಿಲ್ಲದೆ ತಣ್ಣಗೆ ಹರಿಯುವಂತೆ ಈ ಕಾದಂಬರಿಯ ಕಥನ ಸಮಕಾಲೀನ ಸಂದರ್ಭದ ಅಸಂಖ್ಯ ಸಂಗತಿಗಳನ್ನು ಚಿಂತನೆಗೆ ಹಚ್ಚುತ್ತದೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE