ನುಗ್ಗೇಹಳ್ಳಿ ಪಂಕಜ ಅವರ ಕಾದಂಬರಿ ಮಲಯಮಾರುತ. ಸುತ್ತಲೂ ದುಃಖ, ಹತಾಶೆಯ ಭಾವವೇ ತುಂಬಿರುವಾಗ ಅದನ್ನು ಮರೆಯಲು, ವಿಸ್ಮಯ ಮೂಡಿಸುವ ಕಥೆಯ ಕಾದಂಬರಿಯನ್ನು ಓದುವುದೇ ಸರಿಯಾದ ಪರಿಹಾರ. ಅಂತಹ ಒಂದು ಕಾದಂಬರಿಯ ಪರಿಚಯ ಇಲ್ಲಿದೆ. ಆರತಿ ಮತ್ತು ಮೈನಾ ಲಕ್ಷ್ಮಣನ ಇಬ್ಬರು ಮುದ್ದಿನ ತಂಗಿಯರು. ಹೆಸರಿಗೆ ಅನ್ವರ್ಥವಾಗಿ ಆರತಿ ತನ್ನ ತಾಯಿ ಸೀತಮ್ಮನಿಂದ ಕಲಿತ ಹಳೆಯ ಸಂಪ್ರದಾಯ, ರೂಢಿಗಳನ್ನು ಪಾಲಿಸುವ ವಿಧೇಯ ಮಗಳು. ಆದರೆ ಮೈನಾ, ಹಕ್ಕಿಯಂತೆ ಸ್ವತಂತ್ರವಾಗಿ ಹಾರಾಡುತ್ತಾ, ಹಾಡುತ್ತಾ ಇರುವ ಲವಲವಿಕೆಯ ಸುಂದರ ಹೆಣ್ಣು. ಓದಿ ವಿದೇಶದಲ್ಲಿರುವ ಲಕ್ಷ್ಮಣನಿಗೆ ಸುಷಮ ಎಂಬ ಹೆಣ್ಣಿನೊಂದಿಗೆ ಮದುವೆ ಗೊತ್ತಾಗಿತ್ತು. ಸ್ವಲ್ಪ ದಿನಗಳ ನಂತರ ಅವನು ಊರಿಗೆ ಬರುವವನಿದ್ದ. ತಂದೆತಾಯಿ ಮತ್ತು ಸಹೋದರಿಯರಿಗೆ, ಅವನ ಮದುವೆಯ ಸಂಭ್ರಮ. ಅಂದು ಮನೆಗೆ ಬಂದ ಸುಷಮಳ ಕೈಯಲ್ಲಿದ್ದ ಒಂದು ಫೋಟೋ ನೋಡಿ ಮೈನಾ ಮೈಮರೆಯುತ್ತಾಳೆ. ತನ್ನ ಅಣ್ಣನೇ ಅಪ್ರತಿಮ ಸುಂದರನೆಂದು ಹೆಮ್ಮೆ ಪಡುತ್ತಿದ್ದವಳಿಗೆ ಆ ಫೋಟೋದಲ್ಲಿ ಅವನ ಪಕ್ಕ ನಿಂತ ಸ್ನೇಹಿತ, ಮನಮೋಹಕ ರೂಪದ ಶ್ರೀಕಿಷನ್ ನನ್ನು ನೋಡಿ ಅಚ್ಚರಿ, ಆನಂದ ಎರಡೂ ಆಯಿತು. ತುಂಟ ಕುದುರೆಯಂತಿದ್ದ ಮೈನಾಳಲ್ಲಿ ಮೊದಲ ಬಾರಿ ತಾನು 'ಹೆಣ್ಣು' ಎಂಬ ಮೃದುಭಾವ ಮೂಡಿತು. ಆ ಸುಂದರ ತರುಣನ ಕನಸು ಕಾಣತೊಡಗಿದಳು.ಹೀಗೆ ಕಾದಂಬರಿ ಸಾಗುತ್ತದೆ.
ಸಾಹಿತಿ, ಕನ್ನಡ ಮತ್ತು ಇಂಗ್ಲೀಷ್ ಬಾಷೆಯಲ್ಲಿ ಬರೆಯುವ ಪರಿಣಿತಿ ಹೊಂದಿರುವ ನುಗ್ಗೇಹಳ್ಳಿ ಪಂಕಜ ಅವರು 1929 ಜೂನ್ 2 ರಂದು ಜನಿಸಿದರು. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. “ಕಾವೇರಿಯ ಆರ್ತರವ, ಬರಲೆ ಇನ್ನು ಯಮುನೆ?, ಉಷಾನಿಷೆ, ಮಲಯ ಮಾರುತ, ವೀಣಾ ಓ ವೀಣಾ! ಗಗನ, ಮುಗಿಲ ಮಿಂಚು, ಬಳ್ಳಿಮೊಗ್ಗು, ದೀಪ, ಗೂಡು ಬಿಟ್ಟಹಕ್ಕಿ, ತೇಲಿ ಬಂದ ಬಂಧನ, ಸಂಧ್ಯಾ ಬರುವಳೇ?, ತೆರೆ ಸರಿಯಿತು, ಅಲೆಗೆ ಸಿಕ್ಕಿದ ಎಲೆ, ಟುವ್ವ ಟು ಉಲಿಯಿತು ಗುಬ್ಬಚ್ಚಿ, ಪ್ರತೀಕಾರದ ಸುಳಿಯಲ್ಲಿ, ಮೇಘ ಮತ್ತು ಒಂದು ವಸಂತ ...
READ MORE