About the Author

ಸಾಹಿತಿ, ಕನ್ನಡ ಮತ್ತು ಇಂಗ್ಲೀಷ್ ಬಾಷೆಯಲ್ಲಿ ಬರೆಯುವ ಪರಿಣಿತಿ ಹೊಂದಿರುವ ನುಗ್ಗೇಹಳ್ಳಿ ಪಂಕಜ ಅವರು 1929 ಜೂನ್  2 ರಂದು ಜನಿಸಿದರು. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. “ಕಾವೇರಿಯ ಆರ್ತರವ, ಬರಲೆ ಇನ್ನು ಯಮುನೆ?, ಉಷಾನಿಷೆ, ಮಲಯ ಮಾರುತ, ವೀಣಾ ಓ ವೀಣಾ! ಗಗನ, ಮುಗಿಲ ಮಿಂಚು, ಬಳ್ಳಿಮೊಗ್ಗು, ದೀಪ, ಗೂಡು ಬಿಟ್ಟಹಕ್ಕಿ, ತೇಲಿ ಬಂದ ಬಂಧನ, ಸಂಧ್ಯಾ ಬರುವಳೇ?, ತೆರೆ ಸರಿಯಿತು, ಅಲೆಗೆ ಸಿಕ್ಕಿದ ಎಲೆ, ಟುವ್ವ ಟು ಉಲಿಯಿತು ಗುಬ್ಬಚ್ಚಿ, ಪ್ರತೀಕಾರದ ಸುಳಿಯಲ್ಲಿ, ಮೇಘ ಮತ್ತು ಒಂದು ವಸಂತ ಋತುವಿನಲ್ಲಿ, ಎರಡು ರೆಂಬೆಗಳು, ನಮಸ್ಕಾರ ಗರುಡಮ್ಮನವರೇ, ಏನ್ಸಮಾಚಾರ, ಕೋಣೆಗೊಂದು ಕಥೆ, ಮೂಲೆಗೊಂದು

ಮಾತು” ಅವರ ಮುಖ್ಯ ಕಾದಂಬರಿಗಳು.  ಕಾದಂಬರಿಗಳೊಂದಿಗೆ, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರಿಗೆ “ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, 'ಬಳ್ಳಿಮೊಗ್ಗು' ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘದ 'ಅನುಪಮಾ ಪ್ರಶಸ್ತಿ,' ಇಂಗ್ಲಿಷ್ ಪದ್ಯರಚನೆಗೆ ಅಂತರಾಷ್ಟ್ರೀಯ ಪ್ರಶಸ್ತಿ, 'ಸುವರ್ಣ ಕರ್ನಾಟಕ ಶ್ರೀ ಪ್ರಶಸ್ತಿ', ಲಿಪಿಪ್ರಾಜ್ಞೆ ಪ್ರಶಸ್ತಿಗಳು ಲಭಿಸಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. ಬರಲೆ ಇನ್ನು ಯಮುನೆ ಕಾದಂಬರಿ ಸಿಪಾಯಿ ರಾಮು ಹೆಸರಿನ ಚಲನಚಿತ್ರವಾಗಿದೆ. ಗಗನ, ಮಲಯ ಮಾರುತ, ಉಷಾನಿಶೆ ಕಾದಂಬರಿಗಳು ಸಹ ಚಲನಚಿತ್ರವಾಗಿವೆ. 

 

ಪಂಕಜ ಎನ್. (ನುಗ್ಗೆಹಳ್ಳಿ ಪಂಕಜ)

(02 Jun 1929)