ಮಧುಸಿಂಚನ ವೈ.ಕೆ ಸಂಧ್ಯಾ ಶರ್ಮ ಅವರ ಕಾದಂಬರಿಯಾಗಿದೆ. ಇದೊಂದು ರಮ್ಯ ಕಾದಂಬರಿ. ಹಾಗೆಂದ ಮಾತ್ರಕ್ಕೆ ಬರೀ ಪ್ರೇಮಾಯಣವೇ ತುಂಬಿದೆಯೆಂಬ ಅರ್ಥವಲ್ಲ. ಜೀವನಯಾನ ಬಲು ವಿಚಿತ್ರ ಅಷ್ಟೇ ಅನೂಹ್ಯ ಕೂಡ, ಕಾದಂಬರಿಯ ನಾಯಕಿ ಪೂರ್ವೀ ನಡೆದರೆ ಸವೆಯುತ್ತಾಳೆಂಬಂತೆ ಅತೀ ಜತನದಿಂದ ಹೆತ್ತವರ ಪೋಷಣಿಯಲ್ಲಿ ಬೆಳೆದ ಸುಕುಮಾರಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಎಷ್ಟೆಲ್ಲಾ ಬವಣೆ ಪಡುತ್ತಾಳೆ ಎಂಬುದರ ಸುತ್ತ ಹೆಣೆದ ಕಥೆಯಲ್ಲಿ ವಿಧಿಯ ವಿಚಿತ್ರಲೆಯನ್ನೂ ಚಿತ್ರಿಸಲಾಗಿದೆ. ಮನೋವಿಪ್ಲವದಿಂದ, ಇಬ್ಬಂದಿಗೆ ಸಿಲುಕಿದ ನಾಯಕಿಗೆ ಅವಳನ್ನು ಆಕರ್ಷಿಸಿದ ಹರ್ಷದ್ ದಕ್ಕಿದನೇ ಎಂಬುದನ್ನು ಕಾದಂಬರಿಯನ್ನು ಓದಿಯೇ ತಿಳಿಯಬೇಕು. ಒಟ್ಟಾರೆ ಜೀವನವೊಂದು ಲೆಕ್ಕಾಚಾರವಲ್ಲ. ಹೆಣ್ಣಾದವಳು, ಎಲ್ಲವನ್ನೂ ಕೂಲಂಕಷವಾಗಿ, ಆಳವಾಗಿ ಯೋಚಿಸಿ ತನ್ನ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆನ್ನುವ ಆಶಯ ಇಲ್ಲಿದೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE