ಖ್ಯಾತ ಲೇಖಕ ರಾಮಚಂದ್ರ ಭಾವೆ ಅವರು ಬರೆದ ಕೃತಿ-ಕುರುಕ್ಷೇತ್ರ ಘೋರ ಯುದ್ಧಕ್ಕೆ ಕಾರಣರು ಯಾರು?. ಮಹಾಭಾರತ ಯುದ್ಧವು ಅನಿವಾರ್ಯವಾಗಿತ್ತೆ? ಆಗಿದ್ದರೆ ಅದಕ್ಕೆ ಕಾರಣರು ಯಾರು? ಯುದ್ಧಕ್ಕೆ ಕಾಋಣವಾದ ತಿರುವು ಏನು? ಯುದ್ಧಕ್ಕೆ ಕುರುಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಇತ್ಯಾದಿ ಜಿಜ್ಞಾಸೆಗಳ ಹಿನ್ನೆಲೆಯಲ್ಲಿ ಬರೆದ ಕಾದಂಬರಿ ಇದು.
ಸಾಹಿತಿ ರಾಮಚಂದ್ರ ಭಾವೆ ಅವರು 1949 ಮಾರ್ಚ್ 12ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದರು. ಅಂಚೆ ಕಚೇರಿಯಲ್ಲಿ ನಿವೃತ್ತರು. `ಪ್ರಮೋಶನ್, ಎಂಡಿ ನಾಗರ, ಸುಮನಾ ಅಜ್ಞಾ, ಸಮಾಜಸೇವೆ, ಎರಡು ತಲೆ ರಾಜಕುಮಾರ' ಇತ್ಯಾದಿ. ಇವರಿಗೆ ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಇವರ ಮೊದಲ ಕಾದಂಬರಿ ‘ಅಜ್ಞಾತ’. ಇದಕ್ಕೆ ಅಭಿಮಾನಿ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆಯಿತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ‘ತೆರೆದಬಾಗಿಲು’ ಕಥೆಗೆ ಪ್ರಥಮ ಬಹುಮಾನ; ಮುಂಬಯಿಯ ಸ್ನೇಹ ಸಂಬಂಧ ಪತ್ರಿಕೆಯ ನಾಟಕ ಸ್ಪರ್ಧೆಯಲ್ಲಿ ‘ಎರಡು ತಲೆಯ ರಾಜ ಕುಮಾರ’ ನಾಟಕಕ್ಕೆ ದ್ವಿತೀಯ ಬಹುಮಾನ; ಉತ್ಥಾನ ಕಥಾ ...
READ MORE