ಕರ್ತೃ

Author : ಶ್ರುತಿ ಬಿ.ಎಸ್

Pages 124

₹ 140.00




Year of Publication: 2020
Published by: ಗೋಮಿನಿ ಪ್ರಕಾಶನ
Address: ತುಮಕೂರು

Synopsys

‘ಕರ್ತೃ’ ಲೇಖಕಿ ಶ್ರುತಿ ಬಿ.ಎಸ್ ಅವರ ಕಾದಂಬರಿ. ‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’ ಎಂಬ ಆತ್ಮಕಥನದ ಮೂಲಕ ಚಿರಪರಿಚಿತರಾದ ಶ್ರುತಿ ಅವರ ಕಾದಂಬರಿ ಕರ್ತೃ. ಈ ಕೃತಿಯಲ್ಲಿ ಸೂಕ್ಷ್ಮಾಣು ಜೀವಿ ಹಾಗೂ ಮನುಷ್ಯರ ಜೀವನ್ಮರಣ ಹೋರಾಟದ ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

About the Author

ಶ್ರುತಿ ಬಿ.ಎಸ್
(28 January 1991)

ಲೇಖಕಿ ಶ್ರುತಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರು. ಮೂಲ ಹೆಸರು ಶ್ರುತಿ ರಾವ್. 2008ನೇ ಇಸವಿಯಲ್ಲಿ ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಅನಾರೋಗ್ಯದ  (‘ಆಸ್ಟಿಯೋ ಸರ್ಕೋಮಾ) ಪರಿಣಾಮ ಓದು ನಿಲ್ಲಿಸಿ, ಚಿಕಿತ್ಸೆ ನಂತರ ಮತ್ತೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದು, ಮನೋಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯೂ ಪೂರ್ಣಗೊಳಿಸಿದ್ದಾರೆ.  ಜೊತೆಗೆ, ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದರು. ಅವರ ಅನಾರೋಗ್ಯವು ‘ಬದುಕ ದಿಕ್ಕು ಆಸ್ಟಿಯೋ ಸರ್ಕೋಮಾ’ ಎಂಬ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿತು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇದೇ ಕೃತಿ “Osteosarcoma ...

READ MORE

Related Books