ಲೇಖಕಿ ಶ್ರುತಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರು. ಮೂಲ ಹೆಸರು ಶ್ರುತಿ ರಾವ್. 2008ನೇ ಇಸವಿಯಲ್ಲಿ ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಅನಾರೋಗ್ಯದ (‘ಆಸ್ಟಿಯೋ ಸರ್ಕೋಮಾ) ಪರಿಣಾಮ ಓದು ನಿಲ್ಲಿಸಿ, ಚಿಕಿತ್ಸೆ ನಂತರ ಮತ್ತೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದು, ಮನೋಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯೂ ಪೂರ್ಣಗೊಳಿಸಿದ್ದಾರೆ.
ಜೊತೆಗೆ, ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದರು. ಅವರ ಅನಾರೋಗ್ಯವು ‘ಬದುಕ ದಿಕ್ಕು ಆಸ್ಟಿಯೋ ಸರ್ಕೋಮಾ’ ಎಂಬ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿತು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇದೇ ಕೃತಿ “Osteosarcoma that changed my life” ಎಂಬ ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೂ ಅನುವಾದಗೊಂಡು ಮರು ಮುದ್ರಣಗೊಂಡಿದೆ. ಅವರ ಅಂಕಣ ಬರಹಗಳ ಸಂಕಲನ “ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ” ಹಾಗೂ ಅವರ ಕಾದಂಬರಿ ‘ಕರ್ತೃ’ ರಚಿಸಿದ್ದಾರೆ.