ಲೇಖಕಿ ಸಂಧ್ಯಾ ಶರ್ಮ ವೈ.ಕೆ ಅವರ ಕಾದಂಬರಿ ‘ಕಪ್ಪು ಮೋಡ ಬೆಳ್ಳಿ ಅಂಚು’. 'ಕಪ್ಪು ಮೋಡ-ಬೆಳ್ಳಿ ಅಂಚು' ಹೆಣ್ಣೊಬ್ಬಳ ವಿಷಾದದ ಬದುಕಿನಲ್ಲಿ ಸೋಲು ಸವಾಲುಗಳು ಎದುರಾದರೂ ಆಶಾಕಿರಣ, ಭರವಸೆ ಹೊಂಗಿರಣಗಳು ಮೂಡುತ್ತವೆ, ಮೂಡಲಿ ಎಂಬುದು ಸದಾಶಯ, ಇದು ವಾಸ್ತವದಲ್ಲಿ ಸಾಧ್ಯವೇ ಎಂಬ ಕಾಲಮಾನದ ಇಂದಿನ ಅನುಮಾನ ಮೂಡಿದರೂ ಬದಲಾವಣೆ ಯುಗದಲ್ಲಿ ಎಲ್ಲವೂ ಸಾಧ್ಯ, ಸಾಧ್ಯವಾಗಬೇಕು, ಬಡ ಕುಟುಂಬದಿಂದ ಬಂದ ರಾಧೆಯ ದುರಾದೃಷ್ಟದಿಂದ ಅವಳ ಪಾಲಿಗೆ ಸುಖ ಮರೀಚಿಕೆಯಾದರೂ, ಕಾರೋಡದ ಅಂಚಿನಲ್ಲಿ ನೇಯ್ದ ಬೆಳ್ಳಿಗೆರೆಗಳ ಹಾಗೆ ಅವಳು ನಿರೀಕ್ಷಿಸದ ಸುದಿನ ಅವಳನ್ನರಸಿ ಬಂದು ಬಾಳು ಬಂಗಾರವಾಯಿತೇ? ಕನಸು ಕೈಗೂಡಿತೇ?..ಅವಳ ಕಷ್ಟದ ದಿನಗಳನ್ನೆದುರಿಸಿದ ನತದೃಷ್ಟ ಹೆಣ್ಣು ದೀಪಾ, ಸಂದರ್ಭಗಳ ಇಕ್ಕುಳಕ್ಕೆ ಸಿಲುಕಿ ನಲುಗಿಹೋದ ಹೂವಾದಳು, ಅವಳ ಬಾಳಿನ ಪಟಗಳು ಚಿತ್ತಾದವು. ದಾರುಣಗೊಂಡ ಅವಳ ನಿರ್ಮಾಲ್ಯ' ಬದುಕಿನ ಸಂಕಟಗಳ ಪರಿಚಯ ಇಲ್ಲಿದೆ. ನಮ್ಮ ಸಮಾಜದಲ್ಲಿ ಇಂಥ ನಿರ್ಭಾಗ್ಯ ಮಾನಿನಿಯರದೆಷ್ಟೋ ಮಂದಿ ಇದ್ದಾರೆ. ಬಡತನದಿಂದಾಗಿ ವೇಶೈಯರಾದ ಅಂಥವರ ಬಗ್ಗೆ ನಿಜಕ್ಕೂ ಎಂಥವರಿಗೂ ಸಹಾನುಭೂತಿ ಜಿನುಗುತ್ತದೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE