‘ಕಾನುಘಟ್ಟ’ ಶರಣೆಂಬೆ ವನಕುಲಕೆ- ಲೇಖಕ ಶಿವಾನಂದ ಕಳವೆ ಅವರ ಕಾದಂಬರಿ. ಈ ಕೃತಿಗೆ ಸಾಹಿತ್ಯ ಪ್ರಕಾಶನದ ಮುಖ್ಯಸ್ಥರಾದ ಎಂ.ಎ. ಸುಬ್ರಹ್ಮಣ್ಯ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿ ಕುರಿತು ತಿಳಿಸುತ್ತಾ ‘ಕಾಡು ಕಣಿವೆ ಸುತ್ತಾಡುವ ಶಿವಾನಂದ ಕಳವೆ ಕಾನು ಘಟ್ಟಕ್ಕೆ ಇದೀಗ ಅಪೂರ್ವ ಯಾತ್ರೆ ಹೊರಡಿಸಿದ್ದಾರೆ. ಸ್ವಾಮಿಕಾನು, ದೇವಿಕಾನು, ನೀರಕಾನು, ಕತ್ತಲೆಕಾನುಗಳೆಲ್ಲ ಇಂದು ನಿಸರ್ಗ ಚರಿತೆಯ ಮರೆತ ಪುಟಗಳಾಗುತ್ತಿರುವ ಹೊತ್ತು ನೆನಪಿನ ನಡಿಗೆ ಸಾಗಿದೆ. ತಿಳಿ ನೀರು ಮನದ ತಂಪಾದ ಕಾನಿಗೆ ನಮ್ಮ ಮನಸ್ಸು ಮುಳುಗಿಸುವ ಅಪಾರ ಶಕ್ತಿಯಿದೆ. ಅಕ್ಷರದ ಓದು ಜಗದ ಎಲ್ಲವನ್ನೂ ಕಲಿಯುವ ಅಪಾರ ಅವಕಾಶವೇನೋ ಕೊಟ್ಟಿದೆ, ಆಳಕ್ಕೆ ಬೇರೂರುವುದು ಮರೆತು ಹೋಗುತ್ತಿದೆ. ಜ್ಞಾನೋದಯವಾಗುವಷ್ಟು ಸಮಯ ನಾವ್ಯಾರೂ ಮರದ ಬಡುದಲ್ಲಿ ಕಾಲ ಕಳೆದವರಲ್ಲ. ವಿಜ್ಞಾನದ ಕಾರ್ಯಕಾರಣಗಳ ಆಚೆಗೂ ಅಡಗಿರುವ ನೂರೊಂದು ವಿಸ್ಮಯಗಳಿಂದ ವನವಾಸಿ ಕೊಪ್ಪ, ಕೇರಿ, ಗ್ರಾಮಗುತ್ತುಗಳಲ್ಲಿ ಜೀವ ಉಸಿರಾಡುತ್ತಿವೆ. ನಮ್ಮೂರ ಕಣಿವೆಯ ಮಕ್ಕಳು ತೇಗದ ಮರಗಳಂತೆ ರೆಕ್ಕೆಕಟ್ಟಿಕೊಂಡು ವಿಶ್ವಕ್ಕೆ ಜಿಗಿದಿದ್ದಾರೆ. ತೊಲೆ, ಏಣಿ, ಮೇಜು, ಖುರ್ಚಿ, ಮಂಚ, ಕಂಬವಾಗಿ ಹೋಗಿದ್ದಾರೆ. ಊರ ಬೇರಿನ ಸಹ್ಯಾದ್ರಿಪುರದ ಕೋಟೆಕಾನಿನ ದೇವಿಯೂ ನೆಡುತೋಪಿನ ಆರ್ಭಟಕ್ಕೆ ನಾಪತ್ತೆಯಾದ ಸುದ್ದಿಯಿದೆ, ಮನುಕುಲ ಹಣ ಹುಡುಕುವ ನಿರ್ಧಾರಗಳಿಂದ ಸುತ್ತಲಿನ ಮರಗಳ ಹರಾಜು ತೀರುವ ಮುನ್ನ ನೆಲದ ಮರೆಯ ಕಥನವೊಂದನ್ನು ಕೇಳಬೇಕು. ಪರಿಸರ ಬರಹಗಾರ ಶಿವಾನಂದ ಕಳವೆಯವರ ಕಾನು ಪಯಣದ ಹೃದಯಸ್ಪರ್ಶಿ ಮಾತುಗಳು ಕುತೂಹಲ ಹುಟ್ಟಿಸಿವೆ’ ಎಂದಿದ್ದಾರೆ ಸುಬ್ರಹ್ಮಣ್ಯ. ಹಾಗೇ ಅರಣ್ಯವನ್ನು ನಮ್ಮದೇ ಮಾರ್ಗದಲ್ಲಿ ನೆಲಮೂಲದಿಂದ ಅರಿವ ಪ್ರಯತ್ನ ವಿಶೇಷವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...
READ MORE