About the Author

ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. 

ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. 

ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ಹತ್ಯಾಕಾಂಡ, ಕಂಪ್ಯೂಟರ್ ಊಟ ಹಳ್ಳಿ ಮಾರಾಟ, ಪತ್ರಕರ್ತರೇ ಟೈಂ ಉಂಟಾ?, ಮಳೆ ಮನೆಯ ಮಾತುಕಥೆ, ಕಾನ್ ಬಾಗಿಲು, ಮಣ್ಣಿನ ಓದು, ಒಂದು ತುತ್ತಿನ ಕಥೆ, ಕ್ಷಾಮ ಡಂಗುರ, ಜಲ ವರ್ತಮಾನ, ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ), ಒಡಲ ನೋವಿನ ತೊಟ್ಟಿಲ ಹಾಡು, ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ, ಕಾನ್ ಚಿಟ್ಟೆ, ಹಸಿರು ಪುಸ್ತಕದ ಹಳೆಯ ಪುಟಗಳು, ಕಾಡು ನೆಲದ ಕಾಲಮಾನ, ಕಾನ್ಮನೆಯ ಕಥೆಗಳು, ಕಾವೇರಿ ಖಂಡ ಇತ್ಯಾದಿ. 

ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ, ಸುವರ್ಣ ಸುದ್ದಿವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಪತ್ರಕರ್ತರಿಗೆ ಪರಿಸರ ಕಾಳಜಿಯ ಪಾಠ ಹೇಳುವ ಶಿವಾನಂದ ಕಳವೆ ಅವರಿಗೆ ರಾಜ್ಯದ ವಿವಿಧ ಸಂಘಸಂಸ್ಥೆಗಳು ಗೌರವಿಸಿವೆ.

ಶಿವಾನಂದ ಕಳವೆ

BY THE AUTHOR