ಜೇನು ಆಕಾಶದ ಅರಮನೆಯೊ

Author : ಕ್ಷೀರಸಾಗರ

Pages 152

₹ 110.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 0802216 1900

Synopsys

‘ಜೇನು ಆಕಾಶದ ಅರಮನೆಯೊ’ ಕೃತಿಯು ಕ್ಷೀರಸಾಗರ ಅವರ ಕಾದಂಬರಿ.  ಲೇಖಕರು ಪ್ರಕೃತಿಯನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ವನವೇ ಪ್ರಪಂಚವಾಗಿದಂತಹ ಕಾಡಿನ ಜನರು ತಮ್ಮದೇ ಆದಂತಹ ಆಚಾರ ವಿಚಾರ, ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದರು. ಕೆಲವೊಬ್ಬರ ಸಂಚಿನ ಪರಿಣಾಮವಾಗಿ ಅವರು ಕಾಡನ್ನು ತೊರೆಯುವಂತಹ ಪರಿಸ್ಥಿತಿಯನ್ನು ಲೇಖಕರು ಇಲ್ಲಿ ಕಟ್ಟಿಕೊಡುತ್ತಾರೆ. ಉದ್ಯೋಗ ಅರಸಿ ನಾಡಿಗೆ ಬರುವಂತಹ ಮುಗ್ಧ ಜನಗಳ ಪರಿಸರ ಪ್ರೀತಿ ಹಾಗೂ ಜೀವನ ಶೈಲಿ ಎಲ್ಲವೂ ಹೊಸತಾಗಿದೆ. ಕಾಡಿನ ಜೊತೆ ನಾಡಿನ ಕತೆಯನ್ನು ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. .

 

About the Author

ಕ್ಷೀರಸಾಗರ

ಕ್ಷೀರಸಾಗರ ಅವರು ಸಾವಯವ ಕೃಷಿಕರಾಗಿದ್ದಾರೆ. ಎಂ.ಎ ತತ್ವಶಾಸ್ತ್ರವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸೀಯಡ್ಸ್ ಬೆಂಗಳೂರು ಪೀಪಲ್ ಟ್ರೀ ಹಾಗೂ ಹೆಗ್ಗಡದೇವನಕೋಟೆಯ ಫೆಡಿನಾ ವಿಕಾಸ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಅಡಿಯಲ್ಲಿ ಮೈಸೂರು ಜಿಲ್ಲೆಯ ಸಾಕ್ಷರವಾಹಿನಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಜಿಲ್ಲೆಯ ಲಕ್ಷಾಂತರ ಜನರನ್ನು ಸಾಕ್ಷರರನ್ನಾಗಿ ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.   ಕೃತಿಗಳು:   ಜೇನು ಆಕಾಶದ ಅರಮನೆಯೋ(ಕಾದಂಬರಿ), ದಿಕ್ಕು ತಪ್ಪಿದ  ಕರ್ನಾಟಕ ಭೂ ಸುಧಾರಣೆ((ಸಂಶೋಧನೆ), ಕಾಡಿನ ಮಕ್ಕಳ ಒಡನಾಟದಲ್ಲಿ(ಅನುಭವ ಕಥನ), ಕಾಡಿನ ನಾಡಿ ಮಿಡಿದವರು(ಲೇಖನ ಸಂಗ್ರಹ),  ...

READ MORE

Related Books