About the Author

ಕ್ಷೀರಸಾಗರ ಅವರು ಸಾವಯವ ಕೃಷಿಕರಾಗಿದ್ದಾರೆ. ಎಂ.ಎ ತತ್ವಶಾಸ್ತ್ರವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸೀಯಡ್ಸ್ ಬೆಂಗಳೂರು ಪೀಪಲ್ ಟ್ರೀ ಹಾಗೂ ಹೆಗ್ಗಡದೇವನಕೋಟೆಯ ಫೆಡಿನಾ ವಿಕಾಸ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಅಡಿಯಲ್ಲಿ ಮೈಸೂರು ಜಿಲ್ಲೆಯ ಸಾಕ್ಷರವಾಹಿನಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಜಿಲ್ಲೆಯ ಲಕ್ಷಾಂತರ ಜನರನ್ನು ಸಾಕ್ಷರರನ್ನಾಗಿ ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.  

ಕೃತಿಗಳು:   ಜೇನು ಆಕಾಶದ ಅರಮನೆಯೋ(ಕಾದಂಬರಿ), ದಿಕ್ಕು ತಪ್ಪಿದ  ಕರ್ನಾಟಕ ಭೂ ಸುಧಾರಣೆ((ಸಂಶೋಧನೆ), ಕಾಡಿನ ಮಕ್ಕಳ ಒಡನಾಟದಲ್ಲಿ(ಅನುಭವ ಕಥನ), ಕಾಡಿನ ನಾಡಿ ಮಿಡಿದವರು(ಲೇಖನ ಸಂಗ್ರಹ), 

ಕ್ಷೀರಸಾಗರ