ಹೆಣ್ಣು ಕಟ್ಟಿದ ಮನೆ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 184

₹ 90.00




Year of Publication: 2016
Published by: ಓಂ ಶಕ್ತಿ ಪ್ರಕಾಶನ
Address: ನಂ. 748/12, 58ನೇ ತಿರುವು, 4ನೇ ಹಂತ, ರಾಜಾಜಿನಗರ, ಬೆಂಗಳೂರು-560010
Phone: 080 23354619

Synopsys

ತ.ರಾ.ಸು ಅವರ ಸಾಮಾಜಿಕ ಕಾದಂಬರಿ 'ಹೆಣ್ಣು ಕಟ್ಟಿದ ಮನೆ'. ಹೆಸರೇ ಸೂಚಿಸುವಂತೆ ಸಾಮಾಜಿಕ ಜೀವನವನ್ನು, ಅದರಲ್ಲೂ ಕುಟುಂಬ ಜೀವನವನ್ನು ವಸ್ತುವಾಗಿಸಿ ರಚಿಸಿರುವ ಕಾದಂಬರಿ. ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವುದು, ಸಾಮಾನ್ಯ ಮಧ್ಯಮ ದರ್ಜೆಯ ಸಂಸಾರ. ಕೋಟ್ಯಾನುಕೋಟಿ ಸಂಖ್ಯೆಯಲ್ಲಿರುವ ಈ ಸಂಸಾರಗಳು, ಸುತ್ತ ಚಲಿಸುತ್ತಿರುವ ವಿಶ್ವದ ಯಾವ ವಿದ್ಯಮಾನಗಳ ಅರಿವೂ ಇಲ್ಲದೆ, ಆ ಘಟನೆಗಳಿಂದ ಅಷ್ಟಾಗಿ ಪ್ರಭಾವಿತವಾಗದೆ, ಆ ಘಟನೆಗಳಿಗೆ ತಾವೂ ಏನೊಂದೂ ಕಾಣಿಕೆಯನ್ನೂ ನೀಡದೆ, ಹೇಗೊ ಹುಟ್ಟಿ, ಎಲ್ಲೊ ಅರಳಿ, ಎಂತೋ ಬಾಡಿಹೋಗುವ ವನಸುಮಗಳ ಹಾಗೆ ಬೆಳೆದು ಬಾಳಿ ಅಳಿದುಹೋಗುತ್ತವೆ. ಸಹಸ್ರಾರು ಜನರ ಮಧ್ಯೆ ಇದ್ರೂ, ಯಾರಿಗೂ ಅರಿವಾಗದಂತೆ, ತಮ್ಮ ಪಾಡಿಗೆ ತಾವು ಎಲೆಮರೆಯ ಕಾಯಿಗಳಂತೆ ಇರುತ್ತವೆ. ಇಂಥ ಸಂಸಾರದಲ್ಲಿ ಜೀವಿಸುವ ವ್ಯಕ್ತಿಗಳಲ್ಲಿ, ತಮ್ಮ ದಿನನಿತ್ಯದ ಜೀವನದ ಆಚೆಯ ಯಾವ ಆದರ್ಶಗಳೂ ಇರುವುದಿಲ್ಲ. ಅಂಥ ಆದರ್ಶದ ಅಗತ್ಯವಿದೆ ಎಂದು ಅವರು ತಿಳಿಯುವುದೂ ಇಲ್ಲ. ತಮ್ಮ ಕಣ್ಣಿನಾಚೆಗಿರುವ ಯಾವುದನ್ನು ನೋಡಲೂ ಅವರು ಯತ್ನಿಸುವುದಿಲ್ಲ. ಇಂಥ ಸಂಸಾರ ಪ್ರಪಂಚಕ್ಕೆ, ಸಾಮಾನ್ಯವಾಗಿ, ಹೆಣ್ಣೆ ಕೇಂದ್ರವಾಗಿ, ಆಕೆಯ ಇಷ್ಟಾನಿಷ್ಟಗಳ ವರ್ತುಲದಲ್ಲಿ ಉಳಿದವರು ಸುತ್ತುತ್ತಿರುತ್ತಾರೆ. ನಾಲ್ಕು ಗೋಡೆಗಳ ನಡುವಿನ ಗೃಹವೇ ಪ್ರಪಂಚವೆಂದು ನಂಬಿದವರಿಗೆ, ಆ ಪ್ರಪಂಚವನ್ನು ಸುಖಮಯವನ್ನಾಗಿಯೋ, ದುಃಖಮಯವನ್ನಾಗಿಯೂ ಮಾಡುವ ಹೆಣ್ಣನ್ನಲ್ಲದೆ, ಬೇರಾವುದನ್ನು ಭಾಗ್ಯದೇವತೆ ಎಂದು ನಂಬುವುದು ಸಾಧ್ಯ, ಎಂತಲೇ ಉಳಿದ ಜನ ತಮ್ಮ ಇಷ್ಟ-ಅನಿಷ್ಟ, ಬೇಕು-ಬೇಡ, ಆಗು-ಹೋಗು ಏನಿದೆಯೋ, ಅದೆಲ್ಲವನ್ನೂ, ಆ ಮನೆಯ ಮುಖ್ಯ ಹೆಣ್ಣು. ಆಕೆ ತಾಯಿ- ಯಜಮಾನನ ಗೃಹಿಣಿಯಾಗಿರಬಹುದು. ಇಚ್ಛೆಯ ರಥಕ್ಕೆ ಹೂಡಿ, ಆಕೆ ತೋರಿದತ್ತ ನಡೆಯುತ್ತಾರೆ. ಆದುದರಿಂದಲೇ ಇಂಥ ಸಂಸಾರಗಳಲ್ಲಿ ಹೆಣ್ಣಿನದು ಅತ್ಯಂತ ಪ್ರಧಾನ-ಪ್ರಭಾವ ಶಾಲಿಯಾದ ಪಾತ್ರ. ಈ ಕಾದಂಬರಿ ಅಂತದ್ದೊಂದು ಹೆಣ್ಣಿನ ಸುತ್ತ ನಡೆವ ಕಥೆಯನ್ನು ಒಳಗೊಂಡಿದೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books