ಹೇಮಮಣಿ

Author : ವಿನುತಾ ಹಂಚಿನಮನಿ

Pages 272

₹ 275.00




Year of Publication: 2022
Published by: DAKSHAYINI PRAKASHANA
Address: DAKSHAYINI PRAKASHANA, #418/1, VEENESHAMANNA ROAD, MYSURU - 570004
Phone: 9740129274

Synopsys

'ಒಬ್ಬ ಮಹಿಳೆಗೆ ವಿದ್ಯೆ ಕೊಡಿಸಿದರೆ ಶಾಲೆಯೊಂದನ್ನು ತೆರೆದಂತೆ' ಅನ್ನುವ ಮಾತನ್ನು ಅನುಷ್ಠಾನಕ್ಕೆ ತಂದ ಯುವತಿಯೊಬ್ಬಳ ಜೀವನ ಚರಿತ್ರೆಯೇ ಹೇಮಮಣಿ. ಬಾಲ್ಯದಲ್ಲಿ ವಿದ್ಯೆಯಿಂದ ವಂಚಿತಳಾಗಿ, ಮುಂದೆ ಜೀವನದಲ್ಲಿ ಅದರ ಮಹತ್ವ ತಿಳಿದು ತನಗೆ ಅರಿವಿಲ್ಲದೆಯೇ ಸಾಕ್ಷರತೆಯನ್ನು ಪ್ರಸಾರ ಮಾಡಿದ ಬಡ ಹೆಣ್ಣುಮಗಳು ಈ ಕಾದಂಬರಿಯ ನಾಯಕಿ. ನಮ್ಮೂರಿನಲ್ಲಿ ಬಹಳ ಹತ್ತಿರದಿಂದ ನಾನು ನೋಡಿದ ಕುಟುಂಬದ ಕಿರಿಯ ಮಗಳು ಹೇಮಾ. ವಿವಾಹದ, ಸಂಸಾರಿಕ ಜೀವನದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಅಪ್ರಾಪ್ತ ವಯಸ್ಸಿನಲ್ಲಿ ಮನೆಯ ಹಿರಿಯರು ಅವಳನ್ನು ಮದುವೆ ಮಾಡಿ ಕೊಟ್ಟಾಗ ಸುಕೋಮಲ ಬಾಲೆ ಹೆಂಡತಿಯಾಗಿ, ಮನೆಯ ಹಿರಿಯ ಸೊಸೆಯಾಗಿ ನಂತರ ಎಳೆಯ ವಯಸ್ಸಿನಲ್ಲಿಯೇ ತಾಯಿಯಾಗಿ ಪಡಬಾರದ ಕಷ್ಟ ಪಡುತ್ತಾಳೆ. ತಂದೆಯ ವಯಸ್ಸಿನ ಪತಿ, ತಾಟಕಿಯಂತಹ ಅತ್ತೆಯನ್ನು ತೃಪ್ತಿಪಡಿಸಲು ಹೆಣಗಾಡುತ್ತಾಳೆ. ಇವಳ ಸುಸಂಸ್ಕೃತ ನಡುವಳಿಕೆ ಅವರಿಗೆ ಅಚ್ಚರಿಯ ಮಾತು. ಒಂದು ಮಗುವಿನ ತಂದೆಯಾಗಿದ್ದವನಿಗೆ ಇವಳು ಎರಡನೇ ಹೆಂಡತಿಯಾದಳು. ವಯಸ್ಸು ಹದಿಮೂರಕ್ಕೆ ಮದುವೆಯಾಗಿ, ಹದಿನಾರಕ್ಕೆ ತಾಯಿಯಾದ ಇವಳ ಇಷ್ಟಾನಿಷ್ಟಗಳನ್ನು ಯಾರೂ ಗಮನಿಸಲಿಲ್ಲ. ಮಗುವಿನ ತಂದೆಯಾದವನು ತನ್ನ ಮಗುವನ್ನು ಕೂಡ ನೋಡದೇ, ಅವಳಿಂದ ಬಿಡುಗಡೆ ಹೊಂದದೆ ಮರುಮದುವೆಯಾಗುತ್ತಾನೆ. ಹುಟ್ಟಿ ಬೆಳೆದ ಪರಿವಾರದ ಬಡತನ ಮತ್ತು ಅನಕ್ಷರತೆ ಇದಕ್ಕೆ ಕಾರಣವೆಂದರಿತು ಹೇಮಾ ತನ್ನ ಮಗಳಿಗೆ ಸುಸಂಸ್ಕೃತ, ಸುಶಿಕ್ಷಿತ ಜೀವನ ಕಟ್ಟಿಕೊಡಲು ನಡೆಸಿದ ಜೀವನ ಸಂಘರ್ಷ ಇಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ. ತಾನಷ್ಟೇ ಅಲ್ಲ ತನ್ನ ಸಮೀಪದ ಪರಿಧಿಯಲ್ಲಿ ಬಂದ ಎಲ್ಲರನ್ನೂ ಉದ್ಧಾರ ಮಾಡುವ ಪರುಷಮಣಿ ಹೇಮಾ. ತನ್ನ ಬಾಳು ಹಾಳಾದರೂ ಮಕ್ಕಳ ಉನ್ನತಿಯಲ್ಲಿ ಸಂತಸಪಡುವ ಇವಳು ಸುಖ ಸಂತೋಷ ಅರಿಸಿ ಹೋಗುವವರಿಗೆ ಮಾದರಿಯಾಗಿ ಕಾಣುತ್ತಾಳೆ. ಅವಳ ಇಚ್ಛೆ ಈಡೇರಿತೆ? ಅವಳು ತನ್ನ ಗುರಿ ತಲುಪಲು ಪಟ್ಟ ಬವಣೆಯಲ್ಲಿ ಯಶಸ್ಸು ಕಂಡಳೇ? ತಿಳಿಯಲು ಓದಬೇಕು ಕಾದಂಬರಿ.....

About the Author

ವಿನುತಾ ಹಂಚಿನಮನಿ

ಲೇಖಕಿ ವಿನುತಾ ಹಂಚಿನಮನಿ ಅವರು ಹದಿನೈದು ಕೃತಿಗಳನ್ನು ಹೊರತಂದಿದ್ದಾರೆ. ಆರು ಕವನ ಸಂಕಲನ, ನಾಲ್ಕು ಪ್ರಬಂಧಗಳು, ಎರಡು ಕಥಾಸಂಕಲನ, ಎರಡು ಕಾದಂಬರಿ, ಆತ್ಮಕಥನ ಮತ್ತು ನಾಟಕಗುಚ್ಛ. ಕೃತಿಗಳು: ಅಲೆಗಳು, ತುಂತುರು, ಸಂಗಾತಿ ಮೈರಾ, 'ನನ್ನ ಗ್ರಹಿಕೆಯಲ್ಲಿ ಮಹಾಭಾರತ' ಎಂಬ ಕವನಸಂಕಲನಗಳು. ವನಿತೆಯರ ಜೀವನ ಉಯ್ಯಾಲೆ 2019 ರಲ್ಲಿ ಚೇತನ ಪ್ರಕಾಶನ ದಿಂದ ಪ್ರಕಟಿಸಲ್ಪಟ್ಟ ಪ್ರಬಂಧ ಸಂಕಲನ. ಆಕಾಶವಾಣಿ ಕೇಂದ್ರ, ಧಾರವಾಡದಿಂದ ಬಿತ್ತರಿಸಲ್ಪಟ್ಟ ಭಾಷಣಗಳನ್ನಿಳಗೊಂಡ ಲೇಖನಗಳ ಗುಚ್ಛ. ಸಮಾಜದಲ್ಲಿ ಮಹಿಳೆಯ ಸ್ಥಾನ ಮಾನ, ಉದ್ಯೋಗಸ್ಥ ಮಹಿಳೆಯ ಹೋರಾಟಗಳು, ಕೃಷಿಯಲ್ಲಿ, ಆಧ್ಯಾತ್ಮದಲ್ಲಿ ಮಹಿಳೆ, ತಾಯಿಯಾಗಿ ಮಹಿಳೆ, ಸಾಹಿತ್ಯದಲ್ಲಿ ಮಹಿಳೆ ಹೀಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ...

READ MORE

Excerpt / E-Books

ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಕಾದಂಬರಿಗೆ ತನ್ನದೇ ಆದ ವೈಶಿಷ್ಠö್ಯತೆ ಹಾಗೂ ಇತಿಹಾಸವಿದೆ. ೧೯ನೆಯ ಶತಮಾನದಲ್ಲಿ ಇಂಗ್ಲೀಷ್ ಸಾಹಿತ್ಯದ ಪ್ರೇರಣೆಯಿಂದ ಹೊಸಗನ್ನಡದಲ್ಲಿ ಸಣ್ಣಕಥೆ, ಪ್ರಬಂಧ, ಭಾವಗೀತೆ, ಜೀವನಚರಿತ್ರೆ ಮೊದಲಾದ ಹೊಸಪ್ರಕಾರಗಳು ಹುಟ್ಟಿದಂತೆ, `ನಾವೆಲ್’ ಎಂಬ ಪ್ರಕಾರವೇ `ಕಾದಂಬರಿ’ ಎಂಬ ಹೆಸರಿನಿಂದ ಪ್ರಚಾರಗೊಂಡಿತು ಎಂಬ ಒಂದು ಮಾಹಿತಿ ಇದೆ. ಇನ್ನೊಂದು ಮಾಹಿತಿಯ ಪ್ರಕಾರ ಸಂಸ್ಕೃತದಲ್ಲಿ ಬಾಣಬಟ್ಟ ರಚಿಸಿದ `ಕಾದಂಬರಿ’ ಎಂಬ ಹೆಸರಿನ ಗದ್ಯಕಾವ್ಯದ ಪ್ರೇರಣೆಯಿಂದಲೇ ಇಂಥ ಎಲ್ಲ ಕೃತಿಗಳನ್ನು ಕನ್ನಡದಲ್ಲಿ ಕಾದಂಬರಿ ಎಂಬ ಹೆಸರಿನಿಂದ ಕರೆಯುವ ವಾಡಿಕೆ ಏರ್ಪಟ್ಟಿತು ಎಂದು ತಿಳಿದು ಬರುತ್ತದೆ. ಉಳಿದ ಸಾಹಿತ್ಯದ ಪ್ರಕಾರಗಳಿಗೆ ಹೋಲಿಸಿದರೆ, ಕಥೆ, ಶೈಲಿ, ನಿರೂಪಣೆ, ಚಮತ್ಕಾರಿಕ ವರ್ಣನೆಗಳು, ನವರಸಗಳ ಹಿತಮಿತವಾದ ಸಮ್ಮೇಳಿಸುವಿಕೆ ಮುಂತಾದ ಕಾರಣಗಳಿಂದ ಕಾದಂಬರಿಯ ಪ್ರಕಾರ ಹೆಚ್ಚು ಜನಮನ ಸೂರೆಗೊಳ್ಳುವ ಸಾಹಿತ್ಯ ಪ್ರಕಾರವಾಗಿದೆ. ಸವಣೂರಿನ ಸುಣಗಾರ ಓಣಿಯಲ್ಲಿ ಹುಟ್ಟಿಕೊಳ್ಳುವ ಪ್ರಸ್ತುತ ಕಾದಂಬರಿ ಹೇಮಮಣಿಯ ಕಥೆ. ಆ ಕಾಲಮಾನದ ಜೊತೆಗೆ ಕಥೆಯ ಪಾತ್ರಗಳು ಬದುಕಿ ಬಾಳಿದ ಸವಣೂರಿನ ಇತಿಹಾಸವನ್ನೂ ಅಲ್ಲಿಯ ಸ್ಥಳ ಚಿತ್ರಣವನ್ನೂ ಕಣ್ಣಿಗೆ ಕಟ್ಟುವಂತೇ ಕಟ್ಟಿಕೊಡುವುದೂ ಒಂದು ವಿಶೇಷ ರೀತಿಯ ಆರಂಭವೆನ್ನಿಸುತ್ತದೆ. ಕಥೆಯ ಕೇಂದ್ರಬಿAದುವೆನ್ನಿಸಿಕೊಳ್ಳುವ ಮತ್ತೂರವರ ಮನೆತನ ಪ್ರಸ್ತುತ ಸುಣಗಾರ ಓಣಿಯಲ್ಲಿ ನೂರಾರು ವರ್ಷಗಳಿಂದ ಬದುಕಿ ಬಾಳಿದ ಮನೆತನ. ಒಂದುಕಾಲದಲ್ಲಿ ತುಂಬ ಸ್ಥಿತಿವಂತರೆನ್ನಿಸಿಕೊAಡ `ಮತ್ತೂರವರ’ ಮನೆತನ ಕಾಲಕ್ರಮೇಣ ಅವನತಿಯತ್ತ ಹೊರಳಿ, ಈಗಿನ ಆ ಮನೆಯ ಒಬ್ಬೊಬ್ಬ ಸದಸ್ಯನೂ `ವಡಕು ಮುತ್ತಿನಂತೆ’ ಗತಿಹೀನ ಮತಿಹೀನರಾಗುತ್ತ ಸಾಗಿದ್ದು ಹೇಗೆ? ಎಂಬ ವಿಷಯ ವಸ್ತುವಿನಿಂದಲೇ ತೆರೆದುಕೊಳ್ಳುವ ಕಥೆ, ಆರಂಭದಲ್ಲಿ ತುಸು ಗೊಂದಲ ಹುಟ್ಟಿಸಿದರೂ, ಅರ್ಧ ದಾರಿಗೆ ಸಾಗಿದ ಮೇಲೆ ಒಂದು ನಿರ್ಧಿಷ್ಟ ಗುರಿಯೆಡೆಗೆ ತಿರುಗುತ್ತದೆ. ಖಾಸಾ ಅಕ್ಕತಂಗಿಯರಾದ ಗಂಗವ್ವ ಗೌರವ್ವರನ್ನು ಖಾಸಾ ಅಣ್ಣತಮ್ಮಂದಿರಿಗೇ ಮದುವೆ ಮಾಡಿಕೊಟ್ಟಿದ್ದರಿಂದ ಇಬ್ಬರೂ ಮತ್ತೂರು ಮನೆಯ ಸೊಸೆಯರು. ಗಂಗವ್ವನ ಗಂಡ ತೀರಿಹೋಗಿದ್ದರೆ, ಗೌರವ್ವನ ಗಂಡ ಯಾವುದಕ್ಕೂ ಮುಂದೆ ಹೋಗದವ. ವೃದ್ಧಾಪ್ಯವೂ ಒಂದು ಕಾರಣವಿರಬಹುದು. ಬಡತನಕ್ಕೆ ಮಕ್ಕಳು ಜಾಸ್ತಿ ಎಂಬAತೆ, ಮನೆತುಂಬ ಮಕ್ಕಳು. ದುಡಿಯುವವರಿಗಿಂತ ಕೂತು ಉಣ್ಣುವವರೇ ಜಾಸ್ತಿ. ಇನ್ನು ದುಡಿಯುವ ಕೆಲವರು ಸಕಲ ದುಶ್ಚಟಗಳ ದಾಸರು. ಅವಕ್ಕೆಲ್ಲ ಆಗಿ ಮಿಕ್ಕಿದರೆ, ಮನೆ ನಡೆಸಲು ಹಣ ನೀಡಿಯಾರು. ಇಂಥ ಬಗ್ಗಡದಂಥ ಸಂಸಾರದ ಕೆಸರಿನಲ್ಲಿ ಕಮಲದಂತೆ ಹುಟ್ಟಿದವಳೇ ನಮ್ಮ ಕಥಾನಾಯಕಿ ಹೇಮಾ. ಇಂಥ ಮನೆಯ ಮಕ್ಕಳ ಅಷ್ಟೇ ಏಕೆ? ಹಿರಿಯರÀ ಬಾಳಿನಲ್ಲೂ ಯಾವುದಾದರೂ ಚಮತ್ಕಾರ ಆದೀತು ಎಂದು ಕೂಡಾ ನಿರೀಕ್ಷಿಸಲಸಾಧ್ಯ. `ಹೆಣ್ಣೆಂದರೆ ಅನ್ಯರ ಮನೆಯ ಊಳಿಗ ಮಾಡಲೆಂದೇ ಹುಟ್ಟಿದವಳು’ ಎಂಬ ಶತ ಶತಮಾನದ ಗಟ್ಟಿ ಸಿದ್ಧಾಂತದ ಪ್ರಕಾರವೇ ಆ ಮನೆತನದಲ್ಲೂ ಎಲ್ಲ ನಡೆಯುತ್ತಿದೆ. ಗಂಡು ಜಾತಿಯಾದರೆ ಸಾಕು. ಅವನ ವಯಸ್ಸು ಅಂತಸ್ತು ಅಂದ ಚಂದ ಇವನ್ನೆಲ್ಲ ನೋಡುವುದುಂಟೆ? ಇಡೀ ಮನೆಯವರದು ಇದೇ ನಿಲುವು. ಅಂತೆಯೇ ೧೩ ರ ಎಳೆಯ ಪೋರಿ ಹೇಮಳನ್ನು ಅವಳಿಗಿಂತ ಎರಡುಪಟ್ಟು ವಯಸ್ಸಾದ, ಒಂದು ಮಗುವಿನ ತಂದೆಯಾದ ವಿದುರ ಲಿಂಗರಾಜನಿಗೆ ಕಣ್ಣುಮುಚ್ಚಿ ಧಾರೆ ಎರೆದುಕೊಡುವ ಸಂಗತಿ ಓದಿದಾಗ ಎಂಥವರ ಮನವೂ ಚುರ್ ಎನ್ನದೇ ಇರದು. ಆದರೆ ಬಡತನ ಅಜ್ಞಾನಗಳ ಎದುರು ಯಾವ ಸಿದ್ಧಾಂತವೂ ಕೆಲಸಮಾಡಲಾರದು. ಈ ಮನೆಯವರಿಗೆ ಮನೆಯಲ್ಲಿ ಕೂತು ಉಣ್ಣುವವರ ಸಂಖ್ಯೆ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಅಂತೆಯೇ ಗಂಡೊಬ್ಬನಿಗೆ ಅವಳನ್ನು ಕಟ್ಟಿ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ತರಾತುರಿ ಅವರದ್ದು. ಆಗಲೇ ಎದ್ದಿದ್ದು ಓಣಿಯಲ್ಲಿ ಗುಸು ಗುಸು. ಅವರÀವ್ವÀ ಗಂಗವ್ವನಿಗೂ ಈ ತಳಮಳ ಇಲ್ಲವೆಂದಿಲ್ಲ. ಆದರೆ ಅನಿವಾರ್ಯತೆ ಅವಳನ್ನು ಕಟ್ಟಿಹಾಕಿದೆ. ಮದುವೆಯೆಂದರೆ ಏನೆಂದು ತಿಳಿಯದ ಆ ಪುಟ್ಟ ಪೋರಿ ಹೇಮಾಳಿಗೆ ಅವ್ವನ ದುಗುಡಕ್ಕೆ ಕಾರಣವೇನೆಂದೇ ಹೊಳೆಯುತ್ತಿಲ್ಲ. ಅಲ್ಲಿಯ ತನಕ ಓಣಿಯಲ್ಲಿ ನೋಡಿದ ಮದುವೆಗಳೆಲ್ಲ ನೆನಪಾಗಿ, ಅವರಂತೆ ವಸ್ತಾ ವಡವಿ ಹಾಕ್ಕೊಂಡು ಹೊಸಾ ಶೀರಿ ಉಟ್ಗೊಂಡು ಖುಶೀ ಪಡಬಹುದಲ್ಲಾ. ಎಂಬ ಮುಗ್ಧ ವಿಚಾರದಿಂದ ಒಂಥರಾ ಖುಶಿಯಲ್ಲೇ ಇದ್ದಾಳವಳು. ಆದರೆ ಮುಂದಾಗಿದ್ದು ಎಲ್ಲ ಬಹುತೇಕ ನಿರೀಕ್ಷಿತವೇ. ``ಕತ್ತೀನೂ ನಿಂದೇ ಕುಂಬಳಕಾಯೀನೂ ನಿಂದೇ’ ಎಂಬ ಭಾವದಲ್ಲಿ ಹೆಣ್ಣನ್ನು ಗಂಡಿಗೊಪ್ಪಿಸಿಬಿಡುವ ತಂದೆತಾಯಿಯರು ಅವಳು ಅತ್ತೆಯ ಮನೆಯಲ್ಲಿ ಹೇಗೆ ಬದುಕುತ್ತಿದ್ದಾಳೆಂಬ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದವರು. ಕಷ್ಟವೋ ಸುಖವೋ ಹೇಗಾದರೂ ಒಟ್ಟಿಗೇ ಬಾಳಿಸಿಕೊಂಡು ಹೋಗಿದ್ದರೆ ಅದೊಂದು ಲೆಕ್ಕವಾಗುತ್ತಿತ್ತು. ಆದರೆ `ಆಡುವ ಕೂಸಿನ ಹೊಟ್ಟೆಯಲ್ಲೊಂದು ಕಾಡುವ ಕೂಸಿನ ಬೀಜ ನೆಟ್ಟ ನಾಮ ಮಾತ್ರದ ಅಪ್ಪನೆನ್ನಿಸಿಕೊಂಡ ಲಿಂಗರಾಜ, ಹೆರಿಗೆಗೆ ಹೋದ ಹೆಂಡತಿಯನ್ನು ಮಾತಾಡಿಸುವುದು ಹೋಗಲಿ, ತನ್ನ ಕರುಳುಬಳ್ಳಿಯನ್ನು ಕಣ್ಣೆತ್ತಿ ನೋಡಲೂ ಮನಸು ಮಾಡದ್ದು. ಮುಂದೆ ಆತ ಶಾಶ್ವತವಾಗಿ ಅವಳನ್ನು ಮರೆತು ಮತ್ತೊಂದು ಮದುವೆಯಾಗಿದ್ದು ನಿಜಕ್ಕೂ ಹೇಮಾಳ ಬದುಕಿನ ಬಲುದೊಡ್ಡ ದುರಂತ. ಯಾವ ತಪ್ಪಿಗೆ ಅವಳಿಗೆ ಈ ಶಿಕ್ಷೆ? ಕೇಳುವುದು ಯಾರನ್ನು? ಅರಳುವ ಮೊದಲೇ ಬಾಡಿದ ಆ ಕಿಶೋರಿಯ ಬದುಕು ಮುಂದು ಸಾಗಿದ್ದು ಹೇಗೆ? ಬಳ್ಳಿಗೆ ಕಾಯಿಭಾರವಲ್ಲ ಎಂಬ ಮಾತನ್ನು ಅವಳು ನಿರೂಪಿಸಿದ್ದು ಹೇಗೆ? ಎಂಬುದೇ ಪ್ರಸ್ತುತ ಕಾದಂಬರಿ `ಹೇಮಮಣಿ’ ಯ ಪ್ರಮುಖ ಕಥಾಭಾಗ. ಬಾಲ್ಯದ ಹುಡುಗಾಟದಲ್ಲಿ ಶಾಲೆಗೇ ಹೋಗುವುದಿಲ್ಲವೆಂದು ಹಟಹಿಡಿದಿದ್ದ ಅವಳಿಗೆ ಅದೇ ತಾನು ಮಾಡಿದ ದೊಡ್ಡ ಅಪರಾಧವೆಂದು ತಿಳಿವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಅದೇ ಅಕ್ಷರದ ಹಸಿವಿನಿಂದ ಅದನ್ನು ಈಗಲಾದರೂ ಪಡೆದುಕೊಳ್ಳಬೇಕು. ತನ್ನ ಮಗು ಇದರಿಂದ ವಂಚಿತವಾಗಬಾರದು ಎಂಬ ಅವಳ ಹಟ, ಅದಕ್ಕಾಗಿ ಬದುಕನ್ನು ಬತ್ತಿಯಾಗಿಸಿ, ಜೀವದೆಣ್ಣೆಯ ಹನಿಸಿ ಮಗಳ ಬದುಕಿನಲ್ಲಿ ಅಕ್ಷರದ ದೀಪ ಬೆಳಗಿದ ಅವಳ ಸಾಹಸ ಗಾಥೆಯನ್ನು ಕಥೆಯಾಗಿಸುವ ಮೂಲಕ ಲೇಖಕಿ ಕಥೆಯುದ್ದಕ್ಕೂ ಸಾಕ್ಷರತೆಯ ಮಹತ್ವವನ್ನು ಸಾರಿ ಸಾರಿ ಹೇಳಿದ್ದಾರೆ, ಇದು ಕಥೆಯ ಒಂದು ಸಣ್ಣ ಎಳೆಯಷ್ಟೇ. ಇಲ್ಲಿ ಸಾವಿರಾರು ತೊಡಕುಗಳಿವೆ, ಅವಳು ಜೀವನದುದ್ದಕ್ಕೂ ಸಾಗಿಬಂದ ಮುಳ್ಳಿನ ಹಾದಿಯ ವಿಸ್ತೃತ ವಿವರಣೆಯಿದೆ.

Reviews

ಸಾಹಿತ್ಯ ಎನ್ನುವುದು ಬದುಕಿನ ರಸಬಿಂಬ, ಪ್ರತಿಬಿಂಬ ಎನ್ನುವ ಎಷ್ಟಲ್ಲಾ ವಾದವಿವಾದಗಳಿದ್ದರೂ ಅಂತಿಮವಾಗಿ ಸಾಹಿತ್ಯದಲ್ಲಿರುವುದು ಬದುಕಿನ ಸುಖ-ದುಃಖಗಳೆ. ಅದರೆ ಸಾಹಿತ್ಯ ಒಂದು ಕಲಾಪ್ರಕಾರವಾಗಿರುವುದರಿಂದ ಸಾಹಿತ್ಯದಲ್ಲಿ ಸುಖ-ದು:ಖಗಳೆಂಬ ಬೆಳಕು ಕತ್ತಲೆಯಾಟ ಮೇಲ್ಪದುರಿನದ್ದು ಮಾತ್ರ. ಒಟ್ಟು ಬದುಕಿನಾಟದ ಆಳದಲ್ಲಿ ಅಂತರಗಂಗೆಯಂತೆ ಪ್ರವಹಿಸುವ ಜೀವನ ವಿವೇಕದಿಂದ ಸಾಹಿತ್ಯ ಕೃತಿಮೌಲ್ಯ ನರ‍್ಧರಿತವಾಗುತ್ತದೆ. ಪ್ರಸ್ತುತ ಕಾದಂಬರಿಯ ಇದಕ್ಕೆ ಹೊರತಲ್ಲ. ನೂರಾರು ಪಾತ್ರಗಳು ಹಾಸುಹೊಕ್ಕಾಗಿ ಬಂದುಹೋಗುವ ಈ ಕಾದಂಬರಿಯಲ್ಲಿ ಅಷ್ಟೇ ಸಂಖ್ಯೆಯ ವಿಭಿನ್ನ ಜೀವನ ರೀತಿಗಳಿವೆ. ಆದರೆ ಅಂತಿಮವಾಗಿ ದಡ ತಲುಪಿಸುವ ದಾರಿಯೊಂದೇ ಉಳಿದು ಕಾಲುದಾರಿ, ಕಿರುದಾರಿಗಳೆಲ್ಲಾ ಅಳಿಸಿ ಹೋಗುವಂತೆ ರ‍್ಮನಿರತ ತಾತ್ವಿಕ ಶ್ರದ್ಧೆಯಲ್ಲಿ ಅರಳುವ ಬದುಕಿನ ಬೆಳಕು ಕಣ್ಣದೀಪವಾಗಿ ಮುನ್ನಡೆಸುವ ಜೀವನ ರೀತಿಯೊಂದನ್ನು ಕಟ್ಟಿಕೊಡುವ ಉದಾತ್ತ ಧ್ಯೇಯದಿಂದ ಕಾದಂಬರಿ ಮೆಚ್ಚುಗೆ ಪಡೆಯುತ್ತದೆ.
        ಸ್ವಾತಂತ್ರ‍್ಯ ಪರ‍್ವದಲ್ಲಿ ನವಾಬರ ಆಡಳಿತಕ್ಕೊಳಪಡಿಸಿದ್ದ ಸವಣೂರು ಒಂದು ಸಣ್ಣ ಊರು. ಭಾರತದ ಗ್ರಾಮ ಸಂಸ್ಕೃತಿಯಲ್ಲಿ ಉಸಿರಾಡುತ್ತಿದ್ದ ಸವಣೂರಿನಲ್ಲಿ ನಿಧಾನವಾಗಿ ಆಧುನಿಕತೆಯ ಪ್ರದೇಶವಾಗಲಾರಂಭಿಸಿದ ಕಾಲವಿದು. ಮತ್ತು ಸಿರಿವಂತ ಮನೆತನಗಳು ಶಿಕ್ಷಣ, ಉದ್ಯೋಗದ ಕಾರಣದಿಂದ ನಗರಗಳಿಗೆ ಮುಖಮಾಡಿದರೆ ದುಡಿಮೆ ನಂಬಿದ ಬಡ ರ‍್ಗದ ಜನತೆ ವಿಶೇಷವಾಗಿ ಮಹಿಳೆಯರು ಕುಟುಂಬದ ಅಗತ್ಯಗಳಿಗಾಗಿ ಒಳ-ಹೊರಗೆ ದುಡಿಯಲೇಬೇಕಾದ ಆತಂಕದಲ್ಲಿದ್ದರು. ಬಹು ರ‍್ಮ ಜಾತಿಯ ಜನರೆಲ್ಲಾ ಒಟ್ಟಾಗಿ ರೂಪಿಸಿಕೊಂಡಿದ್ದ ಬಹುಸಂಸ್ಕೃತಿಯ ಪರಿಸರದಲ್ಲಿ ಎಲ್ಲ ಜಾತಿ ರ‍್ಮಗಳ ಹಬ್ಬ, ನಿತ್ಯದ ಆರಾಧನೆ ಪೂಜೆಗಳು ರ‍್ಷವಿಡೀ ಜರುಗುತ್ತ ಜಾತಿ ಬೇಧದ ಗೋಡೆಗಳನ್ನು ಮಸುಕಾಗಿಸಿದ್ದವು. ಗುಡಿಯ ಶಾಲೆಗಳಲ್ಲಿ ಎಲ್ಲ ರ‍್ಗದ ಮಕ್ಕಳಿಗೆ ಮುಕ್ತ ಪ್ರವೇಶವಿದ್ದ ಸೌಹರ‍್ಧದ ವಾತಾವರಣವಿದ್ದರೂ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರ ಅಧೀನತೆ, ಅಮಾಯಕತೆ, ಅಸಹಾಯಕತೆ ಯಥಾಪ್ರಕಾರವಿದ್ದು, ಗಂಡಿನ ಸ್ವೇಚ್ಛೆ, ಬಹುಪತ್ನಿತ್ವ, ವಿವಾಹೇತರ ಸಂಬಂಧಗಳು, ಪ್ರಶ್ನಾತೀತ ಪದ್ಧತಿಯಂತೆ ಸಾಮಾನ್ಯವನಿಸಿದ್ದ ಸಾಮಾಜಿಕ ಸಂರ‍್ಭದಲ್ಲಿ ಮಹಿಳೆಯರ ಮೂಕಸಂಕಟವನ್ನು ಸಡಿಲುಗೊಳ್ಳುತ್ತಿದ್ದ ಅವಿಭಕ್ತ ಕುಟುಂಬ ಸಂಸ್ಕೃತಿಯ ಸ್ವರೂಪ, ಬಡತನ, ವಲಸೆ ಹೀಗೆ ಗ್ರಾಮೀಣ ಪರಿಸರದ ಒಳಿತುಗಳನ್ನು ವಿವಿಧ ಮಾದರಿಗಳಲ್ಲಿ ಬಿಚ್ಚಿಟ್ಟಿರುವ ಕಾದಂಬರಿ ಆರು ದಶಕಗಳ ಪರ‍್ವದ ಗ್ರಾಮೀಣ ನಾಟಕದ ಕಥನವಾಗಿ ಪ್ರಸ್ತುತಗೊಳ್ಳುತ್ತದೆ.
 

Related Books