ಲೇಖಕಿ ವಿನುತಾ ಹಂಚಿನಮನಿ ಅವರು ಹದಿನೈದು ಕೃತಿಗಳನ್ನು ಹೊರತಂದಿದ್ದಾರೆ. ಆರು ಕವನ ಸಂಕಲನ, ನಾಲ್ಕು ಪ್ರಬಂಧಗಳು, ಎರಡು ಕಥಾಸಂಕಲನ, ಎರಡು ಕಾದಂಬರಿ, ಆತ್ಮಕಥನ ಮತ್ತು ನಾಟಕಗುಚ್ಛ.
ಕೃತಿಗಳು: ಅಲೆಗಳು, ತುಂತುರು, ಸಂಗಾತಿ ಮೈರಾ, 'ನನ್ನ ಗ್ರಹಿಕೆಯಲ್ಲಿ ಮಹಾಭಾರತ' ಎಂಬ ಕವನಸಂಕಲನಗಳು. ವನಿತೆಯರ ಜೀವನ ಉಯ್ಯಾಲೆ 2019 ರಲ್ಲಿ ಚೇತನ ಪ್ರಕಾಶನ ದಿಂದ ಪ್ರಕಟಿಸಲ್ಪಟ್ಟ ಪ್ರಬಂಧ ಸಂಕಲನ. ಆಕಾಶವಾಣಿ ಕೇಂದ್ರ, ಧಾರವಾಡದಿಂದ ಬಿತ್ತರಿಸಲ್ಪಟ್ಟ ಭಾಷಣಗಳನ್ನಿಳಗೊಂಡ ಲೇಖನಗಳ ಗುಚ್ಛ. ಸಮಾಜದಲ್ಲಿ ಮಹಿಳೆಯ ಸ್ಥಾನ ಮಾನ, ಉದ್ಯೋಗಸ್ಥ ಮಹಿಳೆಯ ಹೋರಾಟಗಳು, ಕೃಷಿಯಲ್ಲಿ, ಆಧ್ಯಾತ್ಮದಲ್ಲಿ ಮಹಿಳೆ, ತಾಯಿಯಾಗಿ ಮಹಿಳೆ, ಸಾಹಿತ್ಯದಲ್ಲಿ ಮಹಿಳೆ ಹೀಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧಗಳನ್ನು ಒಳಗೊಂಡ ಪುಸ್ತಕಕ್ಕೆ ಶ್ರೀಮತಿ ಮಾಲತಿ ಮುದಕವಿ ಮುನ್ನುಡಿ ಬರೆದಿದ್ದಾರೆ. ನಮ್ಮೂರ ಮಣ್ಣಿನಲಿ 2020 ರಲ್ಲಿ ಶಾಂತೇಶ್ ಪ್ರಕಾಶನದಿಂದ ಪ್ರಕಟಗೊಂಡ ಎಪ್ಪತ್ತು ಕವನಗಳ ಕವನಸಂಕಲನ. ನಮ್ಮೂರ ಪರಿಸರದ ಕವನಗಳು ಬೇರೆ ಬೇರೆ ಸಾಹಿತ್ಯದ ಗ್ರುಪ್ ನಲ್ಲಿ ಬಹುಮಾನಿತ ಕವನಗಳ ಕೃತಿ. ಒಂಟಿ ಹಕ್ಕಿಯ ಪಯಣ 2020 ರಲ್ಲಿ, ಮೈಸೂರಿನ ದಾಕ್ಷಾಯಣಿ ಪ್ರಕಾಶನದಿಂದ ಪ್ರಕಟಗೊಂಡ ಕಥಾಸಂಕಲನ ಹತ್ತು ಸಣ್ಣಕಥೆಗಳ ಸಂಕಲನ. ಒಂಟಿ ಮಹಿಳೆಯ ಜೀವನ ಹೋರಾಟದ ಕಥೆಗಳು. ಮನೆಯಲ್ಲಿ, ಸಂಬಂಧಿಕರಲ್ಲಿ, ಹತ್ತಿರದಿಂದ ಕಂಡ ಮಾನಿನಿಯರ ಜೀವನದ ಬಗ್ಗೆ ಬರೆದ ಕಥೆಗಳು ಇದರಲ್ಲಿವೆ. ಪ್ರತಿಬಿಂಬ: ಆತ್ಮಕಥನ ನಾಟಕಗುಚ್ಛ: ಪರಿತ್ಯಕ್ತೆ ಕವನ ಸಂಕಲನ : ಹೇಮಮಣಿ, ಅವಿಶ್ವಾಸದ ಶ್ವಾಸ ಕಥಾಸಂಕಲನ : ಪ್ರೀತಿಗೊಂದು ಪ್ರಣಾಮ ಪ್ರಬಂಧ ಸಂಕಲನಗಳು