ಹೆಜ್ಜೆ

Author : ಲತಾ ಗುತ್ತಿ

Pages 182

₹ 75.00




Year of Publication: 2004
Published by: ವಿಮೋಚನಾ ಪ್ರಕಾಶನ
Address: ಬಸವನಗರ ಅಥಣಿ ಬೆಳಗಾಂ-591304
Phone: 23393389

Synopsys

ಲೇಖಕಿ ಲತಾ ಗುತ್ತಿಯವರ ಹೆಜ್ಜೆ ಕಾದಂಬರಿಯಲ್ಲಿ ಬರುವ ದೇವದಾಸಿ ಸಂಪ್ರದಾಯದ ಆಳ ಹರವು ಅದರ ಪ್ರಖರತೆಯನ್ನು ಹಾಗೂ ದಲಿತ ಸಮುದಾಯದಲ್ಲಿನ ಬದ್ಧತೆ, ಸಿದ್ಧತೆ, ಪರಿಪಾಲನೆಗೆ ಅವರು ಕೊಡುವ ಒತ್ತು ಎಲ್ಲವನ್ನೂ ಸೂಕ್ಷ್ಮವಾಗಿ ಹಿಡಿದಿಡಲಾಗಿದೆ. ಹಾಗೂ ಮೇಲ್ವರ್ಗದ ಅದರಲ್ಲೂ ಊಳಿಗಮಾನ್ಯ ಪದ್ಧತಿಯ ಗ್ರಾಮ ಮುಖಂಡರು ಶೋಷಣೆ ಮಾಡುವದು ಅವರ ಜನ್ಮಸಿದ್ಧ ಹಕ್ಕೆಂದು ತಿಳಿದು ನಡೆಸುವ ದರ್ಪ ದೌಜರ್ನಗಳನ್ನು ಮತ್ತು ಮೇಲ್ವರ್ಗದವರ ನಡೆದುಕೊಳ್ಳುವ ರೀತಿ ನೀತಿಗಳನ್ನು ಬಹಳಷ್ಟು ಸಹಜವಾಗಿ ಚಿತ್ರಿಸಿದ್ದಾರೆ. ಇಲ್ಲಿ ಬರುವ ಪಾತ್ರದಾರಿ ನೀಲೂ, ಕೆಂಚಿ, ಪಾರ್ವತಿ, ಹಿರಿಯ ಗೌಡತಿ, ಸಿದ್ಧನಗೌಡ, ದ್ಯಾಮ್ಯಾ, ನಾಗಪ್ಪ, ಕಿರಿಯ ಗೌಡ ಜಗದೀಶ, ಡಾ.ನರ್ಮದಾ ದೇಶಪಾಂಡೆ, ಕಸ್ತೂರಿ, ಮನೋಜ ಇವರೆಲ್ಲರ ಪಾತ್ರವು ಜೀವಂತಿಕೆಯಿಂದ ಮೆರೆಯುತ್ತವೆ. ವೈಚಾರಿಕತೆಯು ಶಿಕ್ಷಣದಿಂದ ಹೇಗೆ ಮೂಡುತ್ತದೆ ಅದು ಜನರ ಮೇಲೆ ಯಾವಾಗ ಹೇಗೆ ಪರಿಣಾಮ ಬೀರುತ್ತದೆ, ಬೀರಬೇಕು ಎಂಬುದನ್ನು ಲೇಖಕಿ ಅವರು ತೀರ ಜಾಣತನದಿಂದ ಮತ್ತು ಚಾಣಾಕ್ಷತೆಯಿಂದ ವಿವರಿಸಿದ್ದಾರೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books