ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್(ತ.ರಾ.ಸು.) ಅವರ ಕಾದಂಬರಿ `ಹಾವು ಹಿಡಿದವರು'. ಲೇಖಕರೇ ಕೃತಿಯ ಮುನ್ನುಡಿಯಲ್ಲಿ ಹೇಳುವಂತೆ "ಮನುಷ್ಯನ ಜೀವನ ಹಾವು ಹಿಡಿದ ಕಪಿಯಂತೆ! ಕಪಿ ಹಾವಿನ ತಲೆ ಹಿಡಿದಿರುತ್ತದೆ. ಹಾವು ತನ್ನ ಮೈಯ್ಯಿಂದ ಕಪಿಯ ದೇಹವನ್ನು ಬಿಗಿಗೊಳಿಸುತ್ತಿತ್ತದೆ. ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ಕಪಿಗೆ ಕೈಬಿಟ್ಟರೆ ಹಾವು ಕಡಿಯುವುದೆಂಬ ಭಯ. ಬಿಡದಿದ್ದರೆ ಉಸಿರು ಕಟ್ಟಿ ಸಾಯುವ ಸಂಭವ". ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಹೇಗೆ? ಎಂದಿದ್ದಾರೆ.
ಸಾವಿತ್ರಮ್ಮ ಹುಟ್ಟಿದ ಮಗುವಿಗೆ ತಮ್ಮ ಮಡಿಲಲ್ಲಿದ್ದಾಗಲೇ ತಮ್ಮ ಶೇಷಗಿರಿಯ ಮಗನಿಗೆ ಮದುವೆಮಾಡಿಸಲು ವಾಗ್ದಾನ ಮಾಡಿಸಿಕೊಂಡರು. ಗಂಡ ವಾಸಣ್ಣ ಈಗೇನು ಅವಸರ, ಆ ಕಾಲಕ್ಕೆ ಏನೇನು ಬದಲಾವಣೆಗಳಾಗಿರುತ್ತವೋ ಎಂಬ ಮಾತಿಗೆ ಮನ್ನಣೆ ಸಿಗಲಿಲ್ಲ. ಯಶೋನಾಥ ಪದವಿ ಮುಗಿಸಿದ. ಸಾವಿತ್ರಮ್ಮ ಯಶೋನಾಥನನ್ನು ಅಳಿಯನಾಗಿ ಮಾಡಿಕೊಳ್ಳುವ ಆತುರ ತೋರಿದರು. ವಾಸಣ್ಣ ಅಳಿಯನ ಬಗೆಗೆ ಮಾಹಿತಿ ಸಂಗ್ರಹಿಸಲು ಅಲ್ಲಿರುವ ಗೆಳೆಯರೊಂದಿಗೆ ವಿಚಾರಿಸಿದರು. ಸಿಕ್ಕ ಮಾಹಿತಿ ಅಷ್ಟೇನೂ ಹಿತಕರವಾಗಿರಲಿಲ್ಲ. ಆದರೂ ಸಾವಿತ್ರಮ್ಮನ ಒತ್ತಾಯಕ್ಕೆ ಆ ಮಾಹಿತಿಯನ್ನು ಕಡೆಗಣಿಸಿದರು. ಇನ್ನೇನು ಎಂಗೇಜ್ಮೆಂಟ್ ಸಿದ್ಧತೆ ನಿಗಧಿಯಾಯಿತೆನ್ನುವಾಗ ಬಂತು ಆ ಸ್ಪೋಟಕ ಪತ್ರ. ಮೊದಮೊದಲು ಯಾರೂ ನಂಬದಿದ್ದರೂ ಆ ಪತ್ರದ ಜೊತೆಗಿದ್ದ ಫೋಟೋಗಳು ಸತ್ಯವನ್ನು ಸಾರಿಹೇಳುತ್ತಿದ್ದವು. ಯಶೋನಾಥ ತನ್ನ ತಂಗಿಗೆ ಮೋಸಮಾಡಿದ್ದಾನೆ ಎಂದು ಆಕೆಯ ಅಣ್ಣಂದಿರು ಬರೆದ ಪತ್ರ. ಇದರ ಪರಿಣಾಮವಾಗಿ ಮನೆಯವರ ಬೈಗುಳ, ತಾತ್ಸಾರ. ಮನೆಯವರ ತಿರಸ್ಕಾರದ ಕಾರಣದಿಂದಾಗಿ ಯಶೋನಾಥ ಮನೆ ಬಿಟ್ಟು ಹೋಗಲು ತೀರ್ಮಾನಿಸಿದ. ಎಲ್ಲಿ ಹೋಗುವುದು ತಿಳಿಯದೆ ತೋಟದ ಕಡೆಗೋ, ಝರಿಯ ಕಡೆಗೋ ಗೊಂದಲ ಮೂಡಿ ಕೊನೆಗೆ ಕಾಡಿನ ಕಡೆಗೆ ಹೊರಟ. ಮರೆಯಬೇಕೆಂದುಕೊಂಡವನ್ನು ಮರೆಯಲಾಗದ ತೊಳಲಾಟದಲ್ಲೇ ಕೆಲಹೊತ್ತು ಹೊರಳಾಡಿದ. ಹೀಗೆ ಕಾದಂಬರಿಯು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾ ಹೋಗುತ್ತದೆ.
ಪ್ರಥಮ ಮುದ್ರಣ - 1966 ಮರುಮುದ್ರಣ 1986
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE