‘ಗಜಪತಿ ಸಪ್ತಾಂಗ ಹರಣ’ ಆಧಾರಿತ ಕನ್ನಡಿಗರ ಕಲಿಂಗ ವಿಜಯ ಕೃತಿ ಹಿರಿಯ ಲೇಖಕ ರಂ.ಶ್ರೀ.ಮುರಳಿ ಅವರ ಐತಿಹಾಸಿಕ ಕಾದಂಬರಿ. ಕನ್ನಡ ಸಾಹಿತ್ಯದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಐತಿಹಾಸಿಕ ಕೃತಿಗಳು ಅತ್ಯಂತ ಕಡಿಮೆ. ಈ ಕೊರತೆಯನ್ನು ನೀಗಿಸಲು ಕರ್ನಾಟಕದ ಚರಿತ್ರೆಯನ್ನು ಇಟ್ಟುಕೊಂಡೇ ರಚಿತವಾಗಿರುವ ಕೃತಿ ಗಜಪತಿ ಸಪ್ತಾಂಗ ಹರಣ. ಆದರೆ ಈ ಕತೆಯಲ್ಲಿ ಪ್ರಮುಖ ಸನ್ನಿವೇಶಗಳನ್ನು ಬಿಟ್ಟರೇ ಉಳಿದುದೆಲ್ಲವೂ ಕಾಲ್ಪನಿಕವಾದುದು. ಕೆಲವು ಐತಿಹಾಸಿಕ ವ್ಯಕ್ತಿಗಳು, ರಾಯ, ಅಪ್ಪಾಜಿ, ಗಜಪತಿ ಮೂರು ಮುಖ್ಯ ಪಾತ್ರಗಳು ರಾಮಲಿಂಗ ಎಂಬದು ಐತಿಹಾಸಿಕ ಹೆಸರು. ಶ್ರೀಕೃಷ್ಣದೇವರಾಯನೆಂದರೆ ಕರ್ನಾಟಕ ಮಾಚೆಯ ಮುಕುಟಮಣಿ ಎಂದು ಇತಿಹಾಸಕಾರರೇ ಸಮ್ಮತಿಸಿರುವರು, ಮತ್ತು ಶ್ರೀಕೃಷ್ಣದೇವರಾಯನೆಂದರೆ ಸದ್ಗುಣ ಸಮೂಹವು ಎಂದು ಪರಕೀಯರು ಕೂಡ ಮುಕ್ತ ಕಂಠದಿಂದ ಹೊಗಳಿರುತ್ತಾರೆ. ಈ ಕೃತಿಯಲ್ಲಿ ಅಂತಹ ಚರಿತ್ರೆಗೆ ಭಂಗ ಬಾರದಂತೆ ಕತೆಯನ್ನು ಹೆಣೆಯಲಾಗಿದೆ.
ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. 1906ರ ಜುಲೈ 15ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (1928) ಎಂ.ಎ. (1930) ಮಾಡಿದರು. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. 1933ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 1966ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ...
READ MORE