‘ಗಾರುಡಿಗ ಗಾಂಧಿ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕೃತಿಯಾಗಿದ್ದು, ಸಂಜೀವನಿ ಖೇರ ಕೃತಿಯ ಮೂಲ ಲೇಖಕ. ಕೃತಿಯ ಕುರಿತು ರಾಮದಾಸ ಭಟ್ಕಳ ಹೀಗೆ ಹೇಳಿದ್ದಾರೆ; ಗಾಂಧೀಯ ಜೀವನದೊಳಗೆ ಬಂದ ಮಹಿಳೆಯರು ಇತರರ ಬಗೆಗೂ ಅದ್ಭುತವಾದ ಕಾರ್ಯವನ್ನು ಮಾಡಿದ್ದರ ಹಿನ್ನೋಟವನ್ನು ಸಂಜೀವನಿ ಖೇರ ಅವರು ಅಧ್ಯಯನಶೀಲ ಪದ್ಧತಿಯಿಂದ ಈ ಗ್ರಂಥದಲ್ಲಿ ನೀಡಿದ್ದಾರೆ. ಗಾಂಧೀಯವರಿಗೆ ಮಹಾತ್ಮ ಸಿಗುವ ಮೊದಲೇ ಅವರ ಜೀವನದಲ್ಲಿ ಬಂದ ಕೆಲವು ಸ್ತ್ರೀ-ಪುರುಷರ ಬಗೆಗೆ ನನ್ನ 'ಮೋಹನಮಾಯೆ' ಎಂಬ ಗ್ರಂಥದಲ್ಲಿ ನಾನು ಮಂಡಿಸುವ ಪ್ರಯತ್ನ ಮಾಡಿದ್ದೇನೆ. ಸಂಜೀವನಿ ಖೇರರು 'ಗಾರುಡಿಗ ಗಾಂಧಿ' ಎಂಬ ಗ್ರಂಥದಲ್ಲಿ ಚಿತ್ರಿಸಿದ ರೀತಿಯಲ್ಲೂ ಗಾಂಧೀಯ ಬೇರೊಂದು ಮಗ್ಗಲು ಹೊಸ ಬಗೆಯಲ್ಲಿ ಅರಿವಿಗೆ ತಂದುಕೊಡುತ್ತದೆ. ಸ್ವತಃ ಗಾಂಧೀಯವರೇ ಅನಂತ ವಿಷಯಗಳ ಬಗೆಗೆ ಬರೆದಿದ್ದಾರೆ. ಉದಾಹರಣೆಗಾಗಿ, ಕೃಷಿ, ಅವರ ವ್ಯಕ್ತಿತ್ವದ ಯಾವುದೇ ಒಂದು ಮಗ್ಗಲಿನ ಬಗೆಗೆ ಸಂಶೋಧನೆ ಮಾಡಲು ಜೀವನವೇ ಸಾಲಲಿಕ್ಕಿಲ್ಲ. ಸಂಜೀವನಿ ಖೇರ ಅವರು ಗಾಂಧೀಯ ಜೀವನದಲ್ಲಿ ಬಂದ ಕೆಲವು ಮಹಿಳೆಯರ ಸಂಬಂಧದ ಬಗೆಗೆ ಸಂಶೋಧನೆಯ ಒಂದು ಹೊಸ ಹಾದಿಯನ್ನು ತೋರಿಸಿದ್ದಾರೆ. ಮತ್ತೆ ಸಾಕಷ್ಟು ಕಾರ್ಯ ಮಾಡಬೇಕಿದೆ. ಉದಾಹರಣೆಗಾಗಿ, ಮುರಿಯಲ್ ಲೆಸ್ಟರ್ ಬಗೆಗಿನ ಲೇಖನವು ಈ ದಿಕ್ಕಿನಲ್ಲಿ ನಮ್ಮನ್ನು ಸಾಕಷ್ಟು ಮುಂದಕ್ಕೆ ಒಯ್ಯುತ್ತದೆ, ಮುಂದಿನ ಹಾದಿಯನ್ನು ನಾವು ಹುಡುಕಬೇಕಿದೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE