ಸಾಹಿತಿ ಎಂ. ನರಸಿಂಹಮೂರ್ತಿ (ಮ.ನ.ಮೂರ್ತಿ) ಅವರ ಕೃತಿ-ಗಾನಸುಧಾ. ಸಂಗೀತ ಸಾಧಕನ ಮನೋಸ್ಥಿತಿಗೆ ಸಂಬಂಧ ಪಟ್ಟ ಕಥಾವಸ್ತು ಇಲ್ಲಿದೆ. ಮೊದಲ ಭಾಗದಲ್ಲಿ ನಾಯಕನ ನಡೆ, ನುಡಿ, ಆತ್ಮಸ್ಥೈರ್ಯ, ಅವರ ಸಾಧನೆಯ ಬಗ್ಗೆ ವಿವರಣೆ ಇದ್ದರೆ ದ್ವಿತೀಯ ಭಾಗದಲ್ಲಿ ಕಥಾನಾಯಕ ರಾಮುವಿಗೆ ಸಂಗೀತವೇ ಸರ್ವಸ್ವ. ಪ್ರಾಪಂಚಿಕ ವ್ಯವಹಾರದಲ್ಲಿ ಆತನ ಸಾಧನೆ ಶೂನ್ಯ. ಈ ಸಂಗೀತ ಸಾಧನೆ ಆ ಕಲಾವಿದನ ಏಳು ಬೀಳುಗಳ ಸಂಘರ್ಷವೇ ಇಲ್ಲಿಯ ಕಥಾ ವಸ್ತು.
ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು. ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ...
READ MORE