ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ್ ಅವರು ಬದುಕು, ಪ್ರೀತಿ, ಸಾವು ಮತ್ತು ಕೊಲೆ ಕುರಿತ ಧ್ಯಾನ ಎಂಬ ಶೀರ್ಷಿಕೆಯಡಿ ಬರೆದ ಕಾದಂಬರಿ-ಎದೆಗಾರಿಕೆ. ಕನ್ನಡ ಚಲನಚಿತ್ರವಾಗಿದೆ. ಅದಕ್ಕೆ ಇವರೇ ಸಂಭಾಷಣೆ ಬರೆದಿದ್ದಾರೆ. ರಾಜಕೀಯ ಕಥಾವಸ್ತು ಹೊಂದಿರುವ ಈ ಕೃತಿಯು ಮರಾಠಿಗೂ ಅನುವಾದವಾಗಿದೆ. ‘ದಾದಾಗಿರಿಯ ಆ ದಿನಗಳು’ ಕೃತಿಯು ಸರಣಿ ರೂಪದಲ್ಲಿ ಬಂದಿತ್ತು. ಆಗಿನ ಸಂದರ್ಭ ರಾಜಕೀಯ ಸನ್ನಿವೇಶ ಹೇಗಿತ್ತು? ಅದನ್ನು ಎದುರಿಸಿದ ಬಗೆ ಇತ್ಯಾದಿ ನೈಜ ಘಟನೆಗಳನ್ನು ಆಧರಿಸಿದ ಕೃತಿಯು ರಾಜಕೀಯವಾಗಿ, ಸಾಹಿತ್ಯವಾಗಿ ಸಂಚಲನ ಮೂಡಿಸಿತ್ತು. ಏಕೆಂದರೆ, 1974 ರಿಂದ ಭೂಗತ ಜಗತ್ತು ಹುಟ್ಟಿಕೊಳ್ಳಲು ಆರಂಭಿಸಿತ್ತು. ಈ ಜಗತ್ತಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಇಡೀ ಸಮಾಜ ಎಲ್ಲವುಗಳ ಮಿಶ್ರಣವು ಭೂಗತ ಜಗತ್ತುನ್ನು ಸೃಷ್ಟಿಸಿತ್ತು ಎಂಬ ಚಿತ್ರಣ ಈ ಕೃತಿಯಲ್ಲಿದೆ.
ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...
READ MORE