ಲೇಖಕಿ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕಾದಂಬರಿ -ಕಾಲೇಜು ತರಂಗ. 15 ಅಧ್ಯಾಯಗಳನ್ನು ಹೊಂದಿದೆ. ಕಾಲೇಜು ವಿದ್ಯಮಾನಗಳು ಇಲ್ಲಿಯ ವಸ್ತು. ಪಾತ್ರಗಳ ಆಡುಭಾಷೆಯ ಸಂಭಾಷಣೆ ಗಮನ ಸೆಳೆಯುತ್ತದೆ., ಪ್ರಿನ್ಸಿಪಾಲ್, ಕಾಲೇಜು ಬೋಧನೆ, ಪರಿವೀಕ್ಷಣೆ, ಉಪನ್ಯಾಸಕ- ವಿದ್ಯಾರ್ಥಿಗಳ ಸಂಬಂಧ, ಕಚೇರಿ ಆಡಳಿತ, ಒಟ್ಟಾರೆಯಾಗಿ ಶಿಕ್ಷಣದ ಅವವಸ್ಥೆ ಎಲ್ಲವೂ ತಮಾಷೆಯ ಧಾಟಿಯಲ್ಲಿ ಹೇಳುವುದು ಲೇಖಕರ ಬರೆಹ ವೈಶಿಷ್ಟ್ಯ.
ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್. ಸ್ವಾಮಿ. `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...
READ MORE