ಕತೆಗಳ ಕಲ್ಪನಾ ಲೋಕದಲ್ಲಿ ಅದ್ಭುತವಾಗಿ ಮೂಡಿಬಂದಿರುವ ಕೃತಿ ಲೇಖಕಿ ವೇದಾ ಮಂಜುನಾಥನ್ ಅವರ ಕಿರು ಕಾದಂಬರಿ ‘ಚೆಲ್ಲಿದ ಬೆಳದಿಂಗಳು ಮತ್ತು ಅಜ್ಞಾತವಾಸ’. ಚಂದ್ರನ ಬೆಳದಿಂಗಳನ್ನೇ ಕತೆಯ ಕೇಂದ್ರವಾಗಿರಿಸಿರುವ ಕಾದಂಬರಿಯು, ವ್ಯಕ್ತಿ ಹಾಗೂ ಬೆಳದಿಂಗಳ ನಡುವಿನ ವಿಚಾರವನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಬೆಳದಿಂಗಳೊಂದಿಗೆ ಮನುಷ್ಯನಿಗಿರುವ ಭಾವನೆ ಹಾಗೂ ನಂಟನ್ನು ಇಲ್ಲಿ ಲೇಖಕಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ.
ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ. ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...
READ MORE