‘ಬಿಡುಗಡೆಯ ಬೇಡಿ’ ಹಿರಿಯ ಕಾದಂಬರಿಕಾರ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ಸ್ತ್ರೀಸ್ವಾತಂತ್ರ್ಯದ ಸಮಸ್ಯೆ ಈ ಕಾದಂಬರಿಯ ಕೇಂದ್ರವಸ್ತು. ವಿರೋಧಾಭಾಸಗಳಿಂದ, ವಿಚಾರ-ಆಚಾರಗಳ ನಡುವಿನ ವಿಷಮತೆಯಿಂದ ಕೂಡಿದ ಸಮಾಜದಲ್ಲಿ, ಮುಟ್ಟಿದುದೆಲ್ಲವೂ ಸಮಸ್ಯೆಯೇ ಆಗುವಂತೆ, ಎಲ್ಲವೂ ಅಡ್ಡ ಹಾದಿ ಹಿಡಿಯುವಂತೆ, ಸ್ವಾತಂತ್ರ್ಯವೂ ತನ್ನ ಸಹಜ ಸ್ವರೂಪವನ್ನು ಕಳೆದುಕೊಂಡು ವಿಕಾರವಾಗುತ್ತದೆ ಎನ್ನುತ್ತಾರೆ ಕಾದಂಬರಿಕಾರ ತ.ರಾ.ಸು.
ನಮ್ಮ ದೇಶದಲ್ಲಿಂದು ಇದೇ ಪರಿಸ್ಥಿತಿ ಇದೆ. ಇದರೊಂದಿಗೆ ಅನುಕರಣವೇ ಆಧುನಿಕತೆ ಎಂಬ ವಿಚಿತ್ರ ಜಾಡ್ಯವೂ ಬೆರೆತು, ನಮ್ಮ ಪರಿಸ್ಥಿತಿ ಇಂದು ಇದ್ದದ್ದೂ ಸಮಸ್ಯಾತ್ಮಕವಾಗಿದೆ. ಆಧುನಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ನೈತಿಕ ಆಂದೋಲನಕ್ಕೆ ಸಿಲುಕಿದ ಇಂದಿನ ದಾಂಪತ್ಯ ಜೀವನದಲ್ಲಿ ಸ್ತ್ರೀ-ಪುರುಷರ ಸಂಬಂಧ ಸಮಸ್ಯೆಯಲ್ಲಿ, ಮೇಲೆ ಹೇಳಿರುವ ಪರಿಸ್ಥಿತಿ ಯಾವ ಬಗೆಯ ಪರಿಣಾಮವನ್ನು ಮೂಡಿಸುತ್ತದೆ ಎಂಬುದನ್ನು ಕಾದಂಬರಿ ತೋರಲು ಯತ್ನಿಸುತ್ತದೆ.
ಕಾದಂಬರಿಯ ರಚನೆ-ನಿರೂಪಯಲ್ಲಿ 'ಸ್ಟೀಮ್ ಆಫ್ ಕಾನ್ವಸ್ನೆಸ್' (ಸುಪ್ತ ಮನೋಲಹರಿ) ವಿಧಾನವನ್ನು ಅಲ್ಲಲ್ಲಿ ಅಳವಡಿಸಿಕೊಂಡಿದ್ದಾರೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE