‘ಬೆಟ್ಟದಪುರ’ ಕೃತಿಯು ಎನ್. ಭಾಸ್ಕರ ಆಚಾರ್ಯ ಅವರ ಸಾಮಾಜಿಕ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕಾದಂಬರಿಯಲ್ಲಿನ ಕೆಲವೊಂದು ಸಾಲುಗಳು ಹೀಗೆ ಬಿತ್ತರಿಸಿಕೊಂಡಿದೆ; ಕ್ಷಮಾಗುಣ ಬಹು ದೊಡ್ಡದು. ನಾವು ಭಾರತೀಯರು ಕ್ಷಮಾದಾನಿಗಳು. ಆದರೆ ಅದೇ ಒಂದು ನಮ್ಮ ದುರ್ಬಲತೆ ಕೂಡಾ! ವ್ಯವಸ್ಥೆಯ ದೋಷಗಳಿಗೆ ನಮ್ಮ ಕುರುಡುಗಣ್ಣುಗಳನ್ನು ತಿರುಗಿಸಿದ್ಧೇವೆ, ಕ್ಷಮಿಸಿದ್ದೇವೆ. ಹಾಗಾಗಿ ಆ ದೋಷಗಳೇ ಬೆಳೆದು ನಮ್ಮ ಈಗಿನ ಸಮಾಜ ಜೀವನವನ್ನು ವ್ಯವಸ್ಥೆಯನ್ನು ಕಬಳಿಸುತ್ತಿವೆ. ಮೌಲ್ಯಗಳು ನಾಶವಾಗಿ ಅಪಮೌಲ್ಯಗಳೇ ವಿಜೃಂಭಿಸುತ್ತಿವೆ. ಅಂಥಾ ಸಂದರ್ಭದಲ್ಲಿ ನಮ್ಮ ವ್ಯವಸ್ಥೆಗೆ ಏನಾಗಿದೆ. ಏನು ರೋಗ ಬಡಿದಿದೆ? ಎಂದು ಶೋಧಿಸಲು ಹೊರಟಿರುವ ವೈದ್ಯದಂಪತಿ ಜಯಾ ಮತ್ತು ಮೂರ್ತಿ. ದೊಡ್ಡ ವ್ಯವಸ್ಥೆಯೊಂದರ ಸಣ್ಣಗಾಲಿಗಳಾದ ಇವರು, ಹಳ್ಳಿಯ ಜನ ಜೀವನವನ್ನರಿಯಲು ಬೆಟ್ಟದಪುರಕ್ಕೆ ಬಂದು ನೆಲೆಸುತ್ತಾರೆ- ಹಳ್ಳಿಗರೊಡನೆ ಒಂದಾಗುತ್ತಾರೆ. ಆ ಸಮಯದಲ್ಲಿ ಜಾರಿಗೆ ತರಲಾದ ಭೂಸುಧಾರಣಾ ಶಾಸನದ ಪರಿಣಾಮಗಳನ್ನು ಅಭ್ಯಸಿಸುತ್ತಾರೆ, ತಮ್ಮ ಸಂಘಟನೆಗೆ ವರದಿಗಳನ್ನು ವಿಶ್ಲೇಷಣೆಗಳನ್ನು ಕಳಿಸುತ್ತಾರೆ. ಆ ಸಂಘಟನೆಯ ನಿಜವಾದ ಧ್ಯೇಯೋದ್ದೇಶಗಳೇನು? ಅದರ ಹಿಂದೆ ಯಾರು ಯಾರು ಇದ್ದಾರೆ ಎನ್ನುವುದು ಕತೆ ಸಾಗಿದಂತೆ ಸ್ವಲ್ಪ ಸ್ವಲ್ಪ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ. ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...
READ MORE