ಬೆಳಕು ತಂದ ಬಾಲಕ ಎಂಬುದು ಕಾದಂಬರಿಕಾರ ತ.ರಾ.ಸು ಅವರ ಕಾದಂಬರಿ. ಭಾರತೀಯ ಉಪನಿಷತ್ ಸಾಹಿತ್ಯದಲ್ಲಿ ಕಠೋಪನಿಷತ್ತಿಗೆ ವಿಶೆಷ ಸ್ಥಾನವಿದೆ. ಅಲ್ಲಿ ಬರುವ ನಚಿಕೇತೋಪಾಖ್ಯಾನದ ಮೂಲವೇ ಈ ಕಾದಂಬರಿ. ನಚಿಕೇತನ ಕಥೆ ಇದು. ಕಠೋಪನಿಷತ್ತಿನಲ್ಲಿ ದೊರೆಯುವ ಕಥಾವಸ್ತು ಅತ್ಯಂತ ಅಲ್ಪ; ಕೇವಲ ನಾಲ್ಕಾರು ಶ್ಲೋಕಗಳಲ್ಲಿ, ಮಿಂಚಿನ ವೇಗದಲ್ಲಿ, ಅಷ್ಟೇ ಮಟ್ಟಿಗೆ ಕಣ್ಣು ಕೋರೈಸುವಂತೆ, ನಚಿಕೇತನ ಕಥೆ ಆರಂಭವಾಗಿ ಮುಕ್ತಾಯವಾಗುತ್ತದೆ. ಕಥೆ ಅಷ್ಟು ಅಲ್ಪವಾದರೂ, ಅದು ಸಾರುವ ಸಂದೇಶ, ಜೀವನಕ್ಕೆ ನೀಡುವ ಬೆಳಕು ಸಾಗರದಷ್ಟು ವಿಸ್ತಾರವಾದುದ್ದು; ಭಾರತೀಯ ತತ್ತ್ವಶಾಸ್ತ್ರದ ಆಳವಾದ ಅಭ್ಯಾಸ, ನಿಕಟವಾದ ಅರಿವು ಇಲ್ಲದಿದ್ದವರಿಗೆ ಸುಲಭವಾಗಿ ಅರ್ಥವಾಗದಂಥದ್ದು. ಈ ಕೃತಿ ರಚನೆಗೆ ಬೇಕಾದ ಈ ಅರ್ಹತೆಯ ಅರಿವು ನನಗಿದ್ದಂತೆಯೇ, ಆ ಅರ್ಹತೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೆಂಬ ಅರಿವೂ ನನ್ನಲ್ಲಿದ್ದಿತು. ಕಠೋಪನಿಷತ್ತಿನಲ್ಲೇ ಅಲ್ಲದೆ, ಋಗ್ವೇದ, ಛಾಂದೋಗ್ಯ, ಬೃಹದಾರಣ್ಯಕ ಉಪನಿಷತ್ತುಗಳು, ಮಹಾಭಾರತಗಳಲ್ಲಿ ದೊರೆಯುವ ವಸ್ತುಗಳನ್ನು ಅಳವಡಿಸಿಕೊಂಡು ಈ ಕಾದಂಬರಿಯನ್ನು ರಚಿಸಿದ್ದೇನೆ ಎಂದು ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ. ಐತಿಹಾಸಿಕ ಕಾದಂಬರಿ ರಚನೆಯಲ್ಲಿ ತರಾಸು ಅವರದ್ದು ಅಸಾಧಾರಣ ವ್ಯಕ್ತಿತ್ವ. ವಿಷಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE