ತ.ರಾ.ಸು ಅವರು ಕೊನೆಯ ಕಾದಂಬರಿ-ಬಯಸಿ ಬಿದ್ದ ಬೇಸ್ತು. 1998ರಲ್ಲಿ ಮೊದಲು ಮುದ್ರಣ ಹಾಗೂ ಇದೀಗ ಮೂರನೇ ಮುದ್ರಣ ಕಂಡಿದೆ. ತ.ರಾ.ಸು ಅವರ ಗದ್ಯ ಸಾಹಿತ್ಯ ಶ್ರೀಮಂತ ಮಾತ್ರವಲ್ಲ; ಅದು ಪಾರಿಜಾತ ಸ್ಪರ್ಶದಂತಹ ಮಾಧುರ್ಯವೂ ಆಗಿರುತ್ತದೆ. ಘಟನೆಗಳ ನಿರೂಪಣೆ, ವೀರ್ಯವತ್ತಾದ ಭಾಷೆ, ದೃಶ್ಯಗಳ ವರ್ಣನೆ ಎಲ್ಲವೂ ನವನವೀನ. ಹೀಗಾಗಿ,”ಬಯಸಿ ಬಿದ್ಕಾದ ಬೇಸ್ತು’ ಕಾದಂಬರಿಯು ಓದುಗರನ್ನು ಸೆಳೆಯುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE