ಅವ್ವರಸಿ ರಾಣಿ ಚೆನ್ನಭೈರಾದೇವಿ

Author : ಕೃಷ್ಣಮೂರ್ತಿ ಕವತ್ತಾರ್

Pages 56

₹ 50.00




Year of Publication: 2023
Published by: ಎಂ. ಬಸವರಾಜು
Address: ಎಂ. ಬಸವರಾಜು, ನಂ.ಟಿ-8, 3ನೇ ಮಹಡಿ, ’ಬಿ’ ಬ್ಲಾಕ್ , ಗುರುಪ್ರಿಯ ಆಕಾಶಗಂಗಾ ಅಪಾರ್ಟ್‌ಮೆಂಟ್ 6ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಇಸ್ರೋ ಬಡಾವಣೆ ಬೆಂಗಳೂರು- 560 078

Synopsys

‘ಅವ್ವರಸಿ ರಾಣಿ ಚೆನ್ನಭೈರಾದೇವಿ’ ಕೃಷ್ಣಮೂರ್ತಿ ಕವತ್ತಾರ್ ಅವರ ಕೃತಿಯಾಗಿದೆ. ಇದಕ್ಕೆ ಗಜಾನನ ಶರ್ಮ, ಹುಕ್ಕಲು ಅವರ ಮುನ್ನುಡಿ ಬರಹವಿದೆ; ಪೋರ್ಚುಗೀಸರಿಂದ 'ರೈನಾ ದ ಪೆಮೆಂಟಾ' ಎಂಬ ಬಿರುದು ಪಡೆದು ಕನ್ನಡ ನಾಡಿನ ಕರಾವಳಿ ಮತ್ತು ಪಶ್ಚಿಮ ಮಲೆನಾಡನ್ನು ಐವತ್ನಾಲ್ಕು ವರ್ಷಗಳಷ್ಟು ಸುಧೀರ್ಘ ಕಾಲ ರಾಜ್ಯವಾಳಿದ ವೀರಜಿನವನಿತೆ- ರಾಣಿ ಚೆನ್ನಭೈರಾದೇವಿ. 1552ರಿಂದ 1606ರವರೆಗೆ ಗೇರುಸೊಪ್ಪೆ ಮತ್ತು ಹಾಡುವಳ್ಳಿಗಳೆಂಬ ಜೋಡಿ ರಾಜ್ಯದ ಒಡತಿಯಾಗಿ, ಜನಾನುರಾಗಿಯಾಗಿ ರಾಜ್ಯಭಾರ ನಡೆಸಿದವಳು ಚೆನ್ನಾಭೈರಾದೇವಿ. ವಿದೇಶಗಳಿಗೆ ಕಾಳುಮೆಣಸು, ದಾಲ್ಟಿನ್ನಿ, ಶುಂಠಿ, ಶ್ರೀಗಂಧ, ಬೆಲ್ಲದಂತಹ ಪದಾರ್ಥಗಳನ್ನು ನಿರ್ಯಾತು ಮಾಡಿ ತನ್ನ ರಾಜ್ಯವನ್ನು ಅತ್ಯಂತ ಶ್ರೀಮಂತ ನಾಡನ್ನಾಗಿ ಕಟ್ಟಿ ನಿಲ್ಲಿಸಿದವಳು ರಾಣಿ ಚೆನ್ನಾಭೈರಾದೇವಿ. ತಾನಾಗಿ ಯಾರೊಬ್ಬರ ಮೇಲೂ ಧಾಳಿ ಮಾಡದೆ, ತನ್ನನ್ನು ಕೆಣಕಲು ಬಂದವರನ್ನು ತಲೆಯೆತ್ತಲು ಬಿಡದೆ ಪರಾಕ್ರಮ ತೋರಿದ ವೀರಾಗ್ರಣಿ ಈಕೆ. ಆಕೆಯ ಪ್ರಜೆಗಳು ಅವಳನ್ನು ಪ್ರೀತಿಯಿಂದ 'ಅವ್ವರಸಿ' ಎಂದು ಕರೆದು ಆರಾಧಿಸಿದರು, ಆಧರಿಸಿದರು, ಪ್ರೀತಿ ವಿಶ್ವಾಸ ತೋರಿದರು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಕೃಷ್ಣಮೂರ್ತಿ ಕವತ್ತಾರ್

ಕೃಷ್ಣಮೂರ್ತಿ ಕವತ್ತಾರ್‌ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕವತ್ತಾರ್ ನವರು. ಪ್ರತಿಷ್ಠಿತ ನೀನಾಸಂ ಸಂಸ್ಥೆಯಲ್ಲಿ ರಂಗ ಪದವಿಯನ್ನು ಪಡೆದು, ರಂಗದಾರ್ಶನಿಕರಾಗಿ ಮೂರು ದಶಕಗಳಿಂದ ನೂತನ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ.   ಬಾಲ್ಯದಲ್ಲಿಯೇ ಕರಾವಳಿ ಭಾಗದ ಯಕ್ಷಗಾನ, ಭೂತಕೋಲ, ಭಜನೆ, ಅಟಿಕಳಂಜ, ಸಂಗೀತ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳನ್ನು ಕಲಿತು, ತಮ್ಮ ನೆಲದ ಸಾಂಸ್ಕೃತಿಕ ಸಂಪ್ರದಾಯಗಳ ಅನುಭವಗಳನ್ನು ರಂಗಭೂಮಿಯ ಮುಖೇನ ಹಂಚಿಕೊಂಡಿದ್ದಾರೆ. ಅವರು ನೂರಾರು ನಾಟಕಗಳಲ್ಲಿ ಕೇವಲ ನಟಿಸಿದ್ದಲ್ಲದೇ ಸುಮಾರು ಮುನ್ನೂರು ತುಳು-ಕನ್ನಡ ನಾಟಕಗಳನ್ನು ಅತ್ಯುತ್ತಮವಾಗಿ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. 'ಲೋಕಶಾಕುಂತಲ', ‘ಕರಿಯಜ್ಜನ ಕಥೆಗಳು’, 'ಧರ್ಮೇತ್ತಿ ಮಾಯೆ', 'ಹಯವದನ', 'ತಲೆದಂಡ', 'ಶಸ್ತ್ರ ಸಂತಾನ', 'ಶಸ್ತ್ರ ಪರ್ವ', 'ಅಂಧಯುಗ', 'ಪೌರುಷ ಪರ್ವ', ...

READ MORE

Related Books