ಕತೆ ಕಾದಂಬರಿಗಳಲ್ಲಿ ಮನುಜ ಸ್ವಭಾವದ ಮನೋವೈಜ್ಞಾನಿಕ ವಿಶ್ಲೇಷಣೆ ಮೊಟ್ಟ ಮೊದಲು ಪ್ರಖರವಾಗಿ ಕಾಣಿಸಿಕೊಂಡದ್ದು ಕಾದಂಬರಿಗಾರ್ತಿ ತ್ರಿವೇಣಿ ಯವರ ರಚನೆಗಳಲ್ಲಿಯೇ. ಅವರ ಸಾಮಾಜಿಕ ಕಾದಂಬರಿ ‘ಅವಳ ಮನೆ’. ಈ ಕೃತಿ ಉಳಿದವುಗಳಷ್ಟು ಜನಪ್ರಿಯವಾಗಿಲ್ಲದಿದ್ದರೂ ಓದುಗನ ಮನಸ್ಸು ತಟ್ಟಿವಲ್ಲಿ ಯಶಸ್ವಿಯಾಗಿದೆ. ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನದೇ ಆದ ಒಂದು ಅಸ್ತಿತ್ವ, ಒಂದು ಮನೆಗಾಗಿ ತಲ್ಲಣಿಸುತ್ತಲೇ ಬದುಕು ಕಟ್ಟಿಕೊಳ್ಳುವ ಒಬ್ಬ ಯುವತಿಯ ತನ್ನದೇ ವೈಶಿಷ್ಟ್ಯ ಹೊಂದಿದ ಕತೆ. ಕಥಾನಾಯಕಿ ಸರೋಜಿ. ಸರೋಜಿಯ ಒಳತೋಟಿಗಳ ಚಿತ್ರಣ ಬಹಳ ವಾಚ್ಯ ಅನಿಸಿದರೂ ಅದು ಈ ಕಾದಂಬರಿಯ ಅವಶ್ಯಕತೆಯೂ ಇದ್ದಿರಬಹುದು. ಸರಳ ಭಾಷೆ, ಯಾವುದೇ ಶಬ್ದವೈಭವವಿಲ್ಲದ ಸಂಭಾಷಣೆ, ನವಿರಾದ ಶೈಲಿಯೊಂದಿಗೆ ಕಾದಂಬರಿ ಮನ ಸೆಳೆಯುವುದು ಭಾವಲಹರಿಗಳೊಂದಿಗೆ.
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...
READ MORE