ತರಾಸು ಅವರ ಸಾಮಾಜಿಕ ಕಾದಂಬರಿ ವಿಷಪ್ರಾಶನ. ಭಾವ ರಾಗಜೀವಿಯಾದ ಕಲಾವಿದನೋರ್ವನ ಬಾಳಿನಲ್ಲಿ ಪ್ರಖರ ಭಾವಪ್ರಚೋದಕ ಶಕ್ತಿಯಾದ ಸ್ತ್ರೀ ಅದ್ಭುತ ಪ್ರಭಾವವನ್ನು ಬೀರಬಲ್ಲಳು.ಸಾವಿತ್ರಿಯಂತೆ ಸತ್ತ ಚೇತನವನ್ನು ಜೀವಂತಗೊಳಿಸಬಲ್ಲ ಸಂಜೀವನ ಶಕ್ತಿಯಾಗುವಂತೇ,ಕಾಮದ ಕಾಳ್ಗಿಚ್ಚಾಗಿ,ಸೋಕಿದುದನ್ನು ಸುಟ್ಟು ಉರುಬುವ ರುದ್ರಶಕ್ತಿಯೂ ಆಗ ಬಲ್ಲಳು. ಈ ಕಾದಂಬರಿಯಲ್ಲಿರುವುದು ಎರಡನೆ ಬಗೆಯ ಹೆಣ್ಣಿನ ಚಿತ್ರ.ಹೆಣ್ಣೆಂಬ ಉರಿ ಸೋಕಿ ಬಾಳಿನ ಆದರ್ಶದ ಕಣ್ಣನ್ನು ಕಳಕೊಂಡು ಕುರುಡಾದ ಕಲಾವಿದನೊರ್ವನ ಜೀವನ ಕಥೆಯಿದು. ಜೀವನದ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿದ ವ್ಯಕ್ತಿಯ ಕಥೆಯಿದು. ಎಂದಾದರೊಮ್ಮೆ ಹಗಲಿನಲ್ಲೋ ,ಕಟ್ಟಿರುಳಿನಲ್ಲೋ ಯಾವಾಗಲಾದರೊಮ್ಮೆ ಮನಸ್ಸು ಬಂದಾಗ ಗೆಜ್ಜೆ ಕಟ್ಟಿ ಕುಣಿಯುವ ವಿಚಿತ್ರ ವ್ಯಕ್ತಿ ಸದಾಶಿವ.ಆತನ ಜೊತೆ ಸಂಪರ್ಕವಿರುವ ಒಬ್ಬನೇ ವ್ಯಕ್ತಿ ರಾಜ ಶೇಖರ. ಕ್ರಮೇಣ ಇಬ್ಬರಲ್ಲೂ ಸ್ನೇಹ ಬೆಳೆಯುತ್ತದೆ. ಪತ್ರಿಕೋದ್ಯೋಗಿಯಾದ ರಾಜಶೇಖರನಿಗೆ ಸದಾಶಿವನ ಕಥೆ ಕೇಳುವ ಉತ್ಸಾಹ. ಯಾವಾಗಲೊ ಒಮ್ಮೆ ಗೆಳೆಯನ ಎದುರಲ್ಲಿ ತನ್ನ ಕಥೆಯನ್ನು ಬಿಚ್ಚುತ್ತಾ ಸಾಗುವ ಸದಾಶಿವನ ಮಾತಿನಲ್ಲಿ ಆತನ ಎದೆಯಾಳದಲ್ಲಿ ಅಡಗಿದ ನೋವುಗಳೆಲ್ಲಾ ತೆರೆಯುತ್ತಾ ಸಾಗುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE