ಸುದರ್ಶನ ಮೊಗಸಾಲೆ ಅವರ ಚೊಚ್ಚಲ ಕಾದಂಬರಿ ವೈರಸ್. ರಘುನಾಥ ಚ.ಹ ಅವರು ಈ ಕೃತಿಯ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, 'ವಿಶ್ವವೇ ಒಂದು ಹಳ್ಳಿ' ಎನ್ನುವುದು ಜಾಗತೀಕರಣದ ಜನಪ್ರಿಯ ವ್ಯಾಖ್ಯಾನ. ಆ ಮಾತಿನ ಮೂರ್ತರೂಪದಂತಿರುವ ಮೊಬೈಲ್ ಫೋನನ್ನು ರೂಪಕವಾಗಿ ಬಳಸಿಕೊಂಡು, ಆಧುನಿಕತೆಯ ಒಳಿತು ಕೆಡುಕುಗಳನ್ನು ಶೋಧಿಸುವ ಕೋವಿಡ್ ಕಾಲಘಟ್ಟದ ಕಥನ 'ವೈರಸ್'. ಶೀರ್ಷಿಕೆಯೇ ವೈರಸ್ ಎಂದಿದ್ದರೂ, ತಾನು ಶೋಧಿಸುತ್ತಿರುವ ವೈರಸ್ ಯಾವುದೆನ್ನುವುದನ್ನು ಕಾದಂಬರಿ ಒಡೆದು ಹೇಳುವುದಿಲ್ಲ. ಮಲೆನಾಡಿನ ಪುಟ್ಟ ಹಳ್ಳಿಯ ಚಹರೆಯನ್ನು ಬದಲಿಸಲುಹೊರಟ ತಂತ್ರಜ್ಞಾನವನ್ನು ವೈರಸ್ ಎನ್ನುವುದೊ? ಸಾವಿನ ಆತಂಕವನ್ನು ತಂದ ಕೋವಿಡ್ ಅನ್ನು ವೈರಸ್ ರೂಪದಲ್ಲಿ ನೋಡುವುದೊ? ಭೋಗ ಬಯಕೆಗಳೇ ವೈರಸ್ ರೂಪದಲ್ಲಿ ಜನಮನದಲ್ಲಿ ಸುಪ್ತವಾಗಿ ಅಡಗಿವೆಯೊ? ಓದುಗರಲ್ಲಿ ಮೂಡುವ ಇಂಥ ಪ್ರಶ್ನೆಗಳೇ ಕಾದಂಬರಿಯ ವಸ್ತುವಿನ ಸಂಕೀರ್ಣತೆಯನ್ನು ಹೇಳುವಂತಿವೆ. ಯಾವುದನ್ನೂ ವಾಚ್ಯಗೊಳಿಸದೆ, ವಿವರಗಳನ್ನು ವಿನಾಕಾರಣ ಲಂಬಿಸದೆ ಕಥೆ ಹೇಳಿರುವುದರಲ್ಲಿ ಹಾಗೂ ಸರಿತಪ್ಪುಗಳ ಚೌಕಟ್ಟಿಗೆ ಬದ್ಧವಾಗದ ಸೃಜನಶೀಲತೆಯಲ್ಲಿ ಈ ಕಾದಂಬರಿಯ ಯಶಸ್ಸಿದೆ. ಜಾಗತೀಕರಣದ ತವಕತಲ್ಲಣಗಳನ್ನು ಚಿತ್ರಿಸುವ ಕನ್ನಡ ಸಾಹಿತ್ಯ ಪರಂಪರೆಗೆ 'ವೈರಸ್' ಕಾದಂಬರಿ ಹೊಸ ಸೇರ್ಪಡೆಯಷ್ಟೇ ಅಲ್ಲ, ಮುಖ್ಯವಾದುದೂ ಹೌದು. ವೈರಸ್ ಎನ್ನುವುದು ಹೊರಗಿನದಷ್ಟೇ ಅಲ್ಲ, ಒಳಗಿಗೂ ಸಂಬಂಧಿಸಿದ್ದು ಎನ್ನುವುದರತ್ತ ಕಾದಂಬರಿ ಗಮನಸೆಳೆಯುತ್ತದೆ. ಕಿರಿದರಲ್ಲಿ ಘನವಾದ ಸಾಧ್ಯತೆಯನ್ನು ಹಿಡಿದಿಡಬಹುದು ಎನ್ನುವ ನಂಬಿಕೆ ಹಾಗೂ ರೂಪಕಶಕ್ತಿಯ ಕುರಿತ ಕುತೂಹಲ, ಸುದರ್ಶನ ಮೊಗಸಾಲೆಯವರ ಈ ಕಾದಂಬರಿಯ ಹೊಳದು ಹಚ್ಚಿಸಿವೆ ಎಂದಿದ್ದಾರೆ.
ಸುದರ್ಶನ ಮೊಗಸಾಲೆಯವರು ಉಡುಪಿ ಜಿಲ್ಲೆಯ ಕಾಂತಾವರದವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ ಅವರು,ಅಹಮದಾಬಾದ್ ನಲ್ಲಿರುವ ’ಇಸ್ರೋ’ದ ‘ರಿಮೋಟ್ ಸೆನ್ಸಿಂಗ್’ ಕ್ಷೇತ್ರದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿರುವ ಅನುಭವಿ. 1996ರಲ್ಲಿ ಸಾಫ್ಟ್ ವೇರ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಪ್ರಸ್ತುತ ಫ್ರಾನ್ಸ್ ನ ‘ಡಸೋ ಸಿಸ್ಟಮ್ಸ್’ ಎಂಬ ಸಾಫ್ಟ್ ವೇರ್ ಕಂಪನಿಯ ಭಾರತದ ಅಂಗಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಭಾರತದಲ್ಲಿ ಆಂತ್ರಿಕ ಶಿಕ್ಷಣ ಹಾಗೂ ಸಂಶೋಧನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ಡಸೋ ಸಿಸ್ಟಮ್ಸ್ ಫೌಂಡೇಶನ್’ ಆರಂಭಿಸಿ ಅದರ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಕ್ಷೇತ್ರದ ಜೊತೆಗೆ ಸಾಹಿತ್ಯ, ಸಂಗೀತ, ಯಕ್ಷಗಾನ, ...
READ MORE