ವಂಶೋದ್ಧಾರಕ...!

Author : ರಾಜೇಶ್ವರಿ ಕೆ.ವಿ.

Pages 88

₹ 50.00




Year of Publication: 2011
Published by: ಸ್ನೇಹ ಪಬ್ಲಿಷಿಂಗ್ ಹೌಸ್, ಬೆಂಗಳೂರು.

Synopsys

ಕೆ.ವಿ.ರಾಜೇಶ್ವರಿ ಅವರ ಕಿರು ಕಾದಂಬರಿ ವಂಶೋದ್ಧಾರಕ...!. ಕಥೆ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಕಾಲದಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾಣುತ್ತಿದ್ದ ಸಮಸ್ಯೆಗಳು ಮತ್ತು ನಂಬಿಕೆಗಳ ಕಡೆಗೆ ಗಮನ ಸೆಳೆಯುತ್ತದೆ. ಆಗ ಹೆತ್ತವರು ತಮ್ಮ ಗಂಡು ಮಕ್ಕಳ ಬಗ್ಗೆ ತೋರುವ ವಿಶೇಷ ಆದರ ಮತ್ತು ಹೆಣ್ಣು ಮಕ್ಕಳಲ್ಲಿ ಚಿಕ್ಕಂದಿನಿಂದ ಬೆಳೆಸುತ್ತಿದ್ದ ಕೀಳರಿಮೆಯ ಮನೋಭಾವವನ್ನು ಈ ಕಾದಂಬರಿಯಲ್ಲಿ ಲೇಖಕಿ ಸಹಾನುಭೂತಿಯಿಂದ ಚಿತ್ರಿಸಿದ್ದಾರೆ. ಗಂಡು ಮಕ್ಕಳನ್ನು ಅನಾವಶ್ಯಕವಾಗಿ ಹೀನಾಯಿಸದೆ, ಹೆಣ್ಣು ಮಕ್ಕಳಿಗಿದ್ದ ಅತಂತ್ರತೆಯ ವೈಭವೀಕರಣ ಮಾಡದೆ ಹೆತ್ತವರ ಜವಾಬ್ದಾರಿಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರಥಮ ಮುದ್ರಣ 1988 2ನೇ ಮುದ್ರಣ 2011

About the Author

ರಾಜೇಶ್ವರಿ ಕೆ.ವಿ.

ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ.  ಅವರು  ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ.  ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.  ...

READ MORE

Related Books