ಲೇಖಕ ಬಸವರಾಜ ಪಡೆಯಣ್ಣವರ ಅವರು ಬರೆದ ಕಾದಂಬರಿ-ಟಾಪರ್. ನೀಚನೊಬ್ಬನ ರೋಚಕ ಕಥೆ ಎಂದು ಲೇಖಕರು ಕೃತಿಗೆ ಉಪಶೀರ್ಷಿಕೆ ನೀಡಿದ್ದಾರೆ. ‘ಶಿಕ್ಷಣದ ಮೂಲ ಉದ್ದೇಶ ತೀಕ್ಷ್ಣತೆಯಿಂದ ಶಿಕ್ಷಿಸುವುದಲ್ಲ. ಬದಲಾಗಿ, ಜ್ಞಾನದ ದೀಕ್ಷೆ ಕೊಟ್ಟು ರಕ್ಷಿಸುವುದು’ ಈ ಉದ್ದೇಶದ ಸಂದೇಶವನ್ನು ಒಳಗೊಂಡ ಕಾದಂಬರಿ ಇದು. ಕ್ರಿಮಿನೋಲಜಿ ಕಲಿಯುತ್ತಿದ್ದ ಪುಟ್ಟುಗೆ, ಘಾಟಿನ ರೂಟಿನಲ್ಲಿ ಆಕ್ಸಿಡೆಂಟ್ ಎಂದು ಬಿಂಬಿತವಾದ ಕೊಲೆಯ ಬಗ್ಗೆ ತನಿಖೆ ಮಾಡಲು ಸೂಚನೆ ಬರುತ್ತದೆ. ಅವನು ಮಾಡುತ್ತಿರುವ ರಿಸರ್ಚ್ ಪ್ರಾಜೆಕ್ಟಿಗೆ, ಸಬ್ಜೆಕ್ಟ್ ಸಿಕ್ಕಿತೆಂದು ಪ್ರಮಾದದ ಕಡೆಗೆ ಪ್ರಯಾಣ ಬೆಳೆಸುವನು. ಅಲ್ಲಿ ಹತ್ತಾರು ಜನರೆದುರು ನೂರಾರು ಪ್ರಶ್ನೆಯಿಟ್ಟು, ಕೊಲೆಯ ಅಲೆಯನ್ನು ಭೇದಿಸತೊಡಗಿದ. ಒಂದು ಕೊಲೆಯ ಹಿಂದೆ ಹೋಗಿ, ಮತ್ತೊಂದು ಕೊಲೆಯ ಸುಳಿವಿನಿಂದ, ಮಗದೊಂದರ ತನಿಖೆಗೆ ಇಳಿದನು. ತನಗೂ ತನ್ನ ಆಪ್ತರಿಗೂ ದಾಳಿಯ ಗಾಳಿ ತಾಕಿದರೂ, ಹಿಮ್ಮೆಟ್ಟದೆ ಸತ್ಯವನ್ನು ಬಿಚ್ಚಿಟ್ಟನು. ನಡೆದ ಸೀರಿಯಲ್ ಮರ್ಡರ್ ಗಳಿಗೆ ಕಾಲೇಜ್ ವಿದ್ಯಾರ್ಥಿಗಳೇ ಬಲಿಯಾಗಿದ್ದರು. ಕೊಲೆ, ಮಾಡಿದ್ದಲ್ಲ ಮಾಡಿಸಿದ್ದು ಎಂದು ಗೊತ್ತಾದ ಮೇಲೆ, ಮಾಡಿಸಿದ್ದು ಯಾರು ? ಏಕೆ ? ಹೇಗೆ ? ಇದಕ್ಕೆ ಕಾರಣ ಶಿಕ್ಷಣದ ಜಡತೆಯೋ ? ಅಥವಾ ಶಿಷ್ಟತೆಯ ಕೊರತೆಯೋ ? ಎಂದು ಕಂಡುಹಿಡಿದು, ಮುಂದಾಗುವ ಕೊಲೆಯನ್ನು ತಡೆಹಿಡಿದು, ಅವನ ಪ್ರಾಜೆಕ್ಟ್ ಮುಗಿಸುವುದೇ ಕಥೆಯ ಆಶಯ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕ ಬಸವರಾಜ ಪಡೆಯಣ್ಣವರ ಅವರು ಬಹುಮುಖಿ ಪ್ರತಿಭೆಯಳ್ಳವರು. ನಾಟಕಕಾರರು, ಹವ್ಯಾಸಿ ಕಲಾವಿದರು. ಬರಹಗಾರರು. ಇವರ ಕಾವ್ಯನಾಮ-ರವಿಸುತ. ಕೃತಿಗಳು: ಟಾಪರ್ (ಕಾದಂಬರಿ) ...
READ MORE